ಸಂಗೂರ ಸಕ್ಕರೆ ಕಾರ್ಖಾನೆಗೆ ಬೀಗ ಜಡಿದ ರೈತರು; 50 ಕೋಟಿ ರೂ. ಬಾಕಿ ಪಾವತಿಸಲು ಆಗ್ರಹ

7 HVR 7 A
Published on

ಹಾವೇರಿ: ತಾಲೂಕಿನ ಸಂಗೂರ ಗ್ರಾಮದ ಜಿಎಂ ಸಕ್ಕರೆ ಕಾರ್ಖಾನೆಯವರು ಎರಡು ತಿಂಗಳ ಕಬ್ಬಿನ ಬಾಕಿ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ರೈತರು ಫ್ಯಾಕ್ಟರಿಗೆ ಬೀಗ ಹಾಕಿ ಪ್ರತಿಭಟಿಸಿದರು.
ರೈತರ ಖಾತೆಗೆ ಬಾಕಿ ಬಿಲ್ ಪಾವತಿಸುವವರೆಗೂ ಪ್ರತಿಭಟನೆ ಕೈಬಿಡಲ್ಲ. ಫ್ಯಾಕ್ಟರಿ ಲಾರಿಗಳ ಸಂಚಾರಕ್ಕೆ ಅವಕಾಶ ಕೊಡಲ್ಲ ಎಂದು ಪಟ್ಟು ಹಿಡಿದರು.
ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ, ನಾಗರಾಜ ಕೋಡಿಬಸನಗೌಡರ, ಸಿದ್ದರಾಮಗೌಡ ಕರಿಗೌಡ್ರ ಬಸವರಾಜ ಕೋರಿ, ಗುರುನಂಜಪ್ಪ ಚಂದ್ರಗೇರಿ, ಖಾಜಾಮೈನುದ್ದೀನ್ ಬಂಕಾಪುರ, ಶ್ರೀಕಾಂತ ನರೇಗಲ್, ಮಾಲತೇಶ ಆಲದಕಟ್ಟಿ, ರೇವಣೆಪ್ಪ ಪರಪ್ಪನವರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net