ದುಪ್ಪಟ್ಟು ಹಣದ ಆಮಿಷ ಒಡ್ಡಿ 8 ಲಕ್ಷ ಗುಳುಂ; ಫೇಸ್‌ಬುಕ್‌ನಲ್ಲಿ ಬಂದ ಲಿಂಕ್ ಒತ್ತಿ ಹಣ ಕಳೆದುಕೊಂಡ ವ್ಯಕ್ತಿ

cyber crime
Published on

ಹಾವೇರಿ: ನಮ್ಮ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಮಾಡಿಕೊಡುತ್ತೇವೆ ಎಂದು ಫೇಸ್‌ಬುಕ್ ಜಾಹೀರಾತು ಮೂಲಕ ವ್ಯಕ್ತಿಯೊಬ್ಬರು ಲಿಂಕ್ ಕ್ಲಿಕ್ ಮಾಡಿ 8,49,100 ರೂ. ಹೂಡಿಕೆ ಮಾಡಿ ವಂಚನೆಗೀಡಾಗಿದ್ದಾರೆ.

ವಾಕರಸಾ ಸಂಸ್ಥೆಯ ನೌಕರ ಆನಂದಕುಮಾರ ಫೆ.1ರಂದು ಫೇಸ್‌ಬುಕ್ ಪೇಜ್ ನೋಡುವಾಗ ‘ಹಣ ಇನ್ವೆಸ್ಟ್ ಮಾಡಿದರೆ ದುಪ್ಪಟ್ಟು ಮಾಡಿಕೊಡುತ್ತೇವೆ’ ಎಂದು ವಿಡಿಯೋ ಲಿಂಕ್ ಬಂದಿತ್ತು. ಆ ಲಿಂಕ್ ಕ್ಲಿಕ್ ಮಾಡಿದ ಕೂಡಲೇ ನೇರವಾಗಿ ಕ್ರೋಮ್‌ಗೆ ಹೋಗಿ ಓಪನ್ ಆಗಿ ರಾಯಲ್ ವಿನ್ ಎಂಬ ಆ್ಯಪ್ ಇನ್‌ಸ್ಟಾಲ್ ಆಯಿತು. ನಂತರ ಯೂಸರ್ ನೇಮ್ ಪಾಸ್‌ವರ್ಡ್, ಆಧಾರ್ ಕಾರ್ಡ್, ಪಾನ್‌ಕಾರ್ಡ್, ಮೊಬೈಲ್ ನಂಬರ್ ಹಾಕಿ ಅಕೌಂಟ್ ಕ್ರಿಯೇಟ್ ಮಾಡಿದರು. ಆ್ಯಪ್‌ನಲ್ಲಿ ಹಣ ಹೂಡಿದರೆ ಹೆಚ್ಚು ಲಾಭ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಇದನ್ನು ನಂಬಿ ಲಿಂಕ್ ಕ್ಲಿಕ್ ಮಾಡಿದಾಗ ವಿವಿಧ ಬ್ಯಾಕ್ ಖಾತೆಗಳ ಮೂಲಕ 8,49,100 ರೂ. ಹಣ ಹೂಡಿಕೆ ಮಾಡಿಕೊಂಡರು. ಅದರಲ್ಲಿ ಲಾಭಾಂಶದ ಹಣ ಎಂದು 88,785 ರೂ. ವಾಪಸ್ ಜಮಾ ಮಾಡಿದರು. ಉಳಿದ ಬಾಕಿ ಹಣ ಕೊಡದೇ ವಂಚಿಸಿದ್ದಾರೆ ಎಂದು ಹಾವೇರಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net