ಹಾವೇರಿ: ಮಾಜಿ ಸೈನಿಕರು ಮತ್ತು ಅವರ ಅವಲಂಭಿತರ ಕುಂದುಕೊರತೆ ನಿವಾರಣಾ ಶಿಬಿರವನ್ನು ಡಿ.15ರಂದು ಬೆಳಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ಬೆಳಗಾವಿ ನಗರದ ಮರಾಠಾ ಲೈಟ್ ಇನ್‌ಫಾಂಟ್ರಿ, ಶಿವಾಜಿ ಸ್ಟೇಡಿಯಂನಲ್ಲಿ, ಆಯೋಜಿಸಲಾಗಿದೆ.
ಈ ಶಿಬಿರದಲ್ಲಿ ಮಾಜಿ ಸೈನಿಕರ ನಿವೃತ್ತಿ ಪಿಂಚಣಿ, ಕುಟುಂಬ ಪಿಂಚಣಗೆ ಸಂಬಂಧಿಸಿದ ವಿಷಯಗಳ ಕುರಿತು ಪರಿಹಾರ ಕ್ರಮ ಕೈಗೊಳ್ಳಲಾಗುವುದು. ಶಿಬಿರದಲ್ಲಿ ಪಾಲ್ಗೊಳ್ಳುವ ಫಲಾನುಭವಿಗಳು ತಮ್ಮ ಸಮಸ್ಯೆ ಕುರಿತು ಹೆಸರುಗಳನ್ನು ನೊಂದಾಯಿಸಿಕೊಂಡು, ನೋಂದಣಿ ಸಂಖ್ಯೆಯನ್ನು ಪಡೆಯ ಬೇಕಾಗಿರುತ್ತದೆ.
ನೋಂದಣಿ ಮಾಡಿಸುವ ಫಲಾನುಭವಿಗಳು ತಮ್ಮ ಕುಂದು ಕೊರತೆಗಳಿಗೆ ಸಂಭಂಧಿಸಿದ ದಾಖಲೆಗಳನ್ನು ದೂರವಾಣಿ (ವಾಟ್ಸ್ ಆ್ಯಪ್) ಸಂಖ್ಯೆ 83173 50584ಗೆ ಅಪಲೋಡ್ ಮಾಡಬೇಕು. ಈ ಶಿಬಿರದಲ್ಲಿ ಧಾರವಾಡ, ಗದಗ, ಹಾವೇರಿ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗೆ ಸಂಬಧಿಸಿದ ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರು ಸದರಿ ಶಿಬಿರದಲ್ಲಿ ಪಾಲ್ಗೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಧಾರವಾಡ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.