ಸರ್ಕಾರ ಸ್ವಾತಿ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಬೇಕು; ಮಾಜಿ ಸಚಿವ ಈಶ್ವರಪ್ಪ ಆಗ್ರಹ

KS Eshwarappa
Published on

ಹಾವೇರಿ: ನರ್ಸ್ ಸ್ವಾತಿ ಕಗ್ಗೊಲೆ ಆಗಿ 16 ದಿನಗಳು ಕಳೆದು ಹೋಗಿವೆ. ಆಕೆಯ ಕುಟುಂಬದವರಿಗೆ ಧೈರ್ಯ ತುಂಬಲು ಜಿಲ್ಲಾ ಉಸ್ತುವಾರಿ ಸಚಿವರಿಗೆ, ಗೃಹಸಚಿವರು, ಮುಖ್ಯಮಂತ್ರಿಯವರಿಗೆ ಪುರಸೋತ್ತು ಇಲ್ಲ. ರಾಜ್ಯ ಸರ್ಕಾರ ‘ನಾವು ಮುಸಲ್ಮಾನರಿಗೆ ಗುಲಾಮರಾಗಿದ್ದೇವೆ’ ಎಂದು ಘೋಷಿಸುವುದು ಒಳ್ಳೆಯದು ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಿ ತಾಯಿ ಬಡ ನೇಕಾರ ಹಿಂದುಳಿದ ಸಮಾಜದ ಹೆಣ್ಣುಮಗಳು. ಅಂಗನವಾಡಿಯಲ್ಲಿ ಕೆಲಸ ಮಾಡುತ್ತಾರೆ. ಪತಿ ಇಲ್ಲ, ಇನ್ನೂ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ. ಆ ಕುಟುಂಬ ಕಷ್ಟದಲ್ಲಿದೆ. ನಾನು ಸಾಂತ್ವನ ಹೇಳಿ ಪರಿಹಾರ ಕೊಡಲು ಹೋದರೆ, ಆರೋಪಿಗಳಿಗೆ ಶಿಕ್ಷೆಯಾಗಲಿ ಆಗ ಸಮಾಧಾನ ಅಂತಾರೆ ಆ ತಾಯಿ ಎಂದರು.

ಮುಸಲ್ಮಾನ ಹೆಣ್ಣಮಕ್ಕಳನ್ನು ಹಿಂದು ಯುವಕರು ಮುಟ್ಟಿದ್ದರೆ ಸಿಎಂ, ಡಿಸಿಎಂ, ಕ್ಯಾಬಿನೇಟ್ ಅಲ್ಲಿ ಇರುತ್ತಿತ್ತು. ಇಡೀ ಕರ್ನಾಟಕ ಬೆಂಕಿ ಹತ್ತಿಕೊಂಡು ಉರಿತಿತ್ತು. ಇದೊಂದು ಸರ್ಕಾರವೇ ಎಂದು ಕುಟುಕಿದರು. ಹತ್ಯೆಯಾಗಿ 16 ದಿನ ಆದರೂ ತಹಸೀಲ್ದಾರ್ ಡಿಸಿಗೆ ವರದಿ ನೀಡಿಲ್ಲ. ಈ ರಾಜ್ಯದಲ್ಲಿ ಹಿಂದು ಆಗಿ ಹುಟ್ಟಿರೋದೆ ತಪ್ಪಾ ? ಇಂತಹ ಕೃತ್ಯ ಎಸಗಿದವರನ್ನು ಗುಂಡಿಟ್ಟು ಕೊಲ್ಲಬೇಕು. ಮುಸಲ್ಮಾನ ಹಿರಿಯರಿಗೆ ಪ್ರಾರ್ಥನೆ ಮಾಡುತ್ತೇನೆ. ಹಿಂದು ಹೆಣ್ಣುಮಕ್ಕಳಿಗೆ ಅನ್ಯಾಯ ಮಾಡುವವರಿಗೆ ಬುದ್ದಿ ಹೇಳಿ. ಎಲ್ಲ ಹೆಣ್ಣುಮಕ್ಕಳೂ ಒಂದೇ. ಯಾರಿಗೂ ಮೋಸ ಮಾಡಬಾರದು ಎಂದರು.

ಸಂವಿಧಾನ, ಸುಪ್ರೀಂಕೋರ್ಟ್ ಎಲ್ಲ ಮರೆತು ಹೋಯಿತಾ ಸಿದ್ದರಾಮಯ್ಯನವರೇ. ದೇಶದಲ್ಲಿ ಶೇ.4ರಷ್ಟು ಮೀಸಲಾತಿ ಎಲ್ಲಿಯೂ ಇಲ್ಲ. ಆದರೆ ರಾಜ್ಯದಲ್ಲಿದೆ. ಅಧಿಕಾರಕ್ಕಾಗಿ ಹಿಂದುಗಳ ಎಷ್ಟು ಹೆಣ ಬಿದ್ದರೂ ಸಾಕಾಗಲ್ಲ. ಮುಸಲ್ಮಾನರು- ಕಾಂಗ್ರೆಸ್ ಸರ್ಕಾರದವರು ಏನು ಬೀಗರಾ ? ಸ್ವಾತಿ ಕುಟುಂಬಕ್ಕೆ ಅತಿಹೆಚ್ಚು ಪರಿಹಾರ ಕೊಡಬೇಕು. ಮುಸಲ್ಮಾನ ಗುಲಾಮಗಿರಿಯಿಂದ ಮೊದಲು ಹೊರಬರಬೇಕು ಎಂದು ಆಗ್ರಹಿಸಿದರು.

ಭಾರತೀಯ ಜನತಾ ಪಕ್ಷ, ಹಿಂದುತ್ವ ನನ್ನ ರಕ್ತದಲ್ಲಿದೆ. ಸದ್ಯ ಬಿಜೆಪಿಯಲ್ಲಿ ಹೊಂದಾಣಿಕೆ ರಾಜಕಾರಣ ಇದೆ. ಹಿಂದುತ್ವ ಇಲ್ಲ. ಎಲ್ಲವೂ ಶುದ್ದೀಕರಣ ಆಗಬೇಕಿದೆ. ಕಾಂಗ್ರೆಸ್ ಮುಖಂಡರು ಅವರ ಪಪಕ್ಷಕ್ಕೆ ನನ್ನನ್ನು ಆಹ್ವಾನಿಸುತ್ತಿದ್ದಾರೆ. ನನ್ನುಸಿರು ಇರುವವರೆಗೂ ಬೇರೆ ಪಕ್ಷಕ್ಕೆ ಹೋಗಲ್ಲ ಎಂದರು.

ಆರ್‌ಎಸ್‌ಎಸ್ ಇಲ್ಲದಿದ್ದರೆ ಮುಸ್ಲಿಂಮಯ

ಸಿದ್ದರಾಮಯ್ಯನವರಿಗೆ ಆರ್‌ಎಸ್‌ಎಸ್ ಕಂಡರೆ ಕೋಪ. ನಾಚಿಕೆ ಆಗಬೇಕು ನಿಮಗೆ. ಆರ್‌ಎಸ್‌ಎಸ್ ಇಲ್ಲದಿದ್ದರೆ ದೇಶ ಮುಸ್ಲಿಂ ಮಯ ಆಗುತ್ತಿತ್ತು. ರಾಹುಲ್ ಗಾಂಧಿ-ಸೋನಿಯಾ ಗಾಂಧಿ ಸಂತೃಪ್ತಿ ಪಡಿಸಲು ಇಂತಹ ಹೇಳಿಕೆ ಕೊಡುತ್ತಿದ್ದಾರೆ. ಒಮ್ಮೆ ಯೋಚಿಸಿ. ಆರ್‌ಎಸ್‌ಎಸ್‌ನಿಂದ ಅಪರಾಧ ಆಗಿದೆ ಅಂತ ಒಂದು ಉದಾಹರಣೆ ತೋರಿಸಲಿ ಎಂದು ಈಶ್ವರಪ್ಪ ಸವಾಲೆಸೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net