ಸಿಹಿ ಹಂಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದ ಜಿಲ್ಲಾ ಬಿಜೆಪಿ ಘಟಕ; ಮೂರು ರಾಜ್ಯಗಳಲ್ಲಿ ದಿಗ್ವಿಜಯ ಹಿನ್ನೆಲೆ ಸಂಭ್ರಮಾಚರಣೆ

BJP Vijayotsava 2
Published on

ಹಾವೇರಿ: ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸಘಡ ರಾಜ್ಯಗಳಲ್ಲಿ ದಿಗ್ವಿಜಯ ಸಾಧಿಸಿದ್ದರಿಂದ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ವಿಜಯೋತ್ಸವ ಆಚರಿಸಲಾಯಿತು. ಜಿಲ್ಲಾ ಘಟಕದ ಪದಾಧಿಕಾರಿಗಳು ಪರಸ್ಪರ ಸಿಹಿ ತಿನ್ನಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ, ದೇಶಾದ್ಯಂತ ಸುಳ್ಳು ಗ್ಯಾರಂಟಿಗಳ ಘೋಷಣೆಯ ಮೂಲಕ ಅಧಿಕಾರ ಹಿಡಿಯಬಹುದು ಎಂಬ ಭ್ರಮೆಯಲ್ಲಿದ್ದ ಕಾಂಗ್ರೆಸ್‌ಗೆ ಪಂಚರಾಜ್ಯದ ಪ್ರಭುದ್ಧ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿಯ ಮೇಲೆ ದೇಶದ ಜನತೆಗೆ ಗ್ಯಾರಂಟಿ ಇದೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಈ ಮೂಲಕ ಲೋಕಸಭೆ ಚುನಾವಣೆಯಲ್ಲೂ ಹೆಚ್ಚಿನ ಸೀಟು ಗೆಲ್ಲುವ ಭರವಸೆ ಮೂಡಿದೆ ಎಂದರು.
ಹಾವೇರಿ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಗವಿಸಿದ್ದಪ್ಪ ದ್ಯಾಮಣ್ಣನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಶಿಧರ ಹೊಸಳ್ಳಿ ಮತ್ತು ರುದ್ರೇಶ ಚಿನ್ನಣ್ಣನವರ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಡಾ.ಸಂತೋಷ ಆಲದಕಟ್ಟಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ರಮೇಶ ಪಾಲನಕಾರ, ಮಂಜುನಾಥ ಮಡಿವಾಳರ, ವಿಜಯಕುಮಾರ ಚಿನ್ನಿಕಟ್ಟಿ, ಕರಬಸಪ್ಪ ಹಳದೂರ, ನಂಜುಂಡೇಶ ಕಳ್ಳೇರ, ಜಗದೀಶ ಕನವಳ್ಳಿ, ಮಂಜುನಾಥ ತಾಂಡೂರ, ನಿರಂಜನ ಹೇರೂರ, ಸುರೇಶ ಹೊಸಮನಿ, ಅಮೀತ ಪಾಟೀಲ, ಅಲ್ಲಾಭಕ್ಷ ತಿಮ್ಮಾಪೂರ, ಬಸವರಾಜ ಬ್ಯಾಡಗಿ, ಅಭಿಷೇಕ ಗುಡಗೂರ, ನಿಖಿಲ ಡೊಗ್ಗಳ್ಳಿ, ರಾಹುಲ ನವಲೆ, ವಿಜಯಕುಮಾರ ಕುಡಲಪ್ಪನವರ, ಹನುಮಂತಪ್ಪ ದಾಸರ, ಬಸವರಾಜ ಬ್ಯಾಡಗಿ, ಶಂಭುಲಿಂಗ ಹತ್ತಿ, ಶಿವಬಸವ ಚೌಶೆಟ್ಟಿ, ಅಡವಯ್ಯ ಯಲುಗಿಮಠ, ಕಿರಣ ಕೊಳ್ಳಿ, ಶಿವಯೋಗಿ ಕೊಳ್ಳಿ, ಶಿವಾನಂದಯ್ಯ ಗುಗ್ಗರಿ, ಮುತ್ತಣ್ಣ ಮುಷ್ಟಿ, ಗಿರೀಶ ಶೆಟ್ಟರ, ಮಂಜುನಾಥ ಮಡಿವಾಳರ, ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net