ದೈವಜ್ಞ ಬ್ರಾಹ್ಮಣ ಸಮಾಜದ ಮಕ್ಕಳಿಗೆ ಪ್ರಶಸ್ತಿಗೆ ಆಹ್ವಾನ

Published on

ಹಾವೇರಿ: ದಾವಣಗೆರೆಯ ಶ್ರೀಮತಿ ಪ್ರೇಮಾ ಅರುಣಾಚಲ ಎನ್. ರೇವಣಕರ ಪ್ರತಿಷ್ಠಾನದಿಂದ ಪ್ರತಿ ವರ್ಷದಂತೆ ಈ ವರ್ಷವೂ 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.85ರಷ್ಟು ಅಂಕ ಪಡೆದ ದೈವಜ್ಞ ಬ್ರಾಹ್ಮಣ ಸಮಾಜದ ಮಕ್ಕಳಿಗೆ ಶಾರದಾ ಪುರಸ್ಕಾರ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಫಲಿತಾಂಶ ಬಂದ ಬಳಿಕ ಈ ಪ್ರಶಸ್ತಿಗೆ ಅರ್ಹ ಮಕ್ಕಳು ಮತ್ತು ಪಾಲಕರು ಪ್ರವೇಶ ಪತ್ರ ಪಡೆದು ಭರ್ತಿ ಮಾಡಿ ಮೇ 10ರೊಳಗೆ ಕಚೇರಿಗೆ ತಲುಪಿಸಬೇಕು. ಹೆಚ್ಚಿನ ಮಾಹಿತಿ ಹಾಗೂ ಸಂಸ್ಥೆಯ ಅಧಿಕೃತ ಮುದ್ರಿತ ಉಚಿತ ಪ್ರವೇಶ ಪತ್ರಕ್ಕಾಗಿ ಗಣೇಶ ವೆಂಕಟೇಶ ರಾಯ್ಕರ, ವೈಭವ ಜುವೆಲ್ಲರಿ ಶಾಪ್, ಗಾಂಧೀ ರಸ್ತೆ, ಅಕ್ಕಮಹಾದೇವಿ ದೇವಸ್ಥಾನದ ಎದುರು, ಹಾವೇರಿ ಈ ವಿಳಾಸ ಸಂಪರ್ಕಿಸಬಹುದು ಎಂದು ಸಂಸ್ಥೆಯ ಸಂಸ್ಥಾಪಕ ಡಾ.ನಲ್ಲೂರು ಅರುಣಾಚಲ ಎನ್. ರೇವಣಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net