ಗಾಂಧಿ ತತ್ವ ಅಳವಡಿಸಿಕೊಳ್ಳೋಣ; ಸಾರಿಗೆ ಸಂಸ್ಥೆ ಡಿಟಿಒ ಅಶೋಕ ಪಾಟೀಲ ಕರೆ

Published on

ಹಾವೇರಿ: ಮಹಾತ್ಮಾ ಗಾಂಧೀಜಿ ತತ್ವ, ಆದರ್ಶಗಳು ಹಾಗೂ ಅಹಿಂಸಾ ಮಾರ್ಗಗಳನ್ನು ನಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳೋಣ ಎಂದು ಎಂದು ವಿಭಾಗೀಯ ಸಾರಿಗೆ ಅಧಿಕಾರಿ (ಡಿಟಿಒ) ಅಶೋಕ ಪಾಟೀಲ ಕರೆ ನೀಡಿದರು.

ನಗರದ ಹಾವೇರಿ ವಿಭಾಗೀಯ ಕಚೇರಿಯಲ್ಲಿ ಗುರುವಾರ ಮಹಾತ್ಮಾ ಗಾಂಧೀಜಿ ಜಯಂತಿ ಆಚರಚಣೆ ಸಮರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ವಿಭಾಗದ ಹಾಗೂ ಸಂಸ್ಥೆಯ ಅಭಿವೃದ್ಧಿಗೆ ಕಾಯಾ, ವಾಚಾ ಮತ್ತು ಮನಸ್ಸಿನಿಂದ ಶ್ರಮಿಸುವಂತೆ ಮನವಿ ಮಾಡಿದರು.

ಕಾರ್ಮಿಕ ಕಲ್ಯಾಣಧಿಕಾರಿ ಸಿ.ಕಡ್ಲಿಮಟ್ಟಿ, ಟಕ ವ್ಯವಸ್ಥಾಪಕ ಆರ್.ಸಿ.ಪಾಟೀಲ, ಲೆಕ್ಕಪತ್ರ ಅಧೀಕ್ಷಕ ಕೃಷ್ಣಾ ರಾಹುತನಕಟ್ಟಿ, ಸಿಬ್ಬಂದಿ ಹಾಜರಿದ್ದರು.

ಬಸ್ ನಿಲ್ದಾಣ ಸ್ವಚ್ಛತೆ :

ಗಾಂಧೀ ಜಯಂತಿ ಅಂಗವಾಗಿ ಹಾವೇರಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾತು. ಅಭಿಯಾನದಲ್ಲಿ ಡಿಟಿಒ ಅಶೋಕ ಪಾಟೀಲ, ಅಧಿಕಾರಿಗಳು, ಸಿಬ್ಬಂದಿ ಶ್ರಮದಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net