

ಹಾವೇರಿ: ನಿವೃತ್ತ ಮುಖ್ಯೋಪಾಧ್ಯಾಯ ದಿ.ಬಸವರಾಜ ಅಪ್ಪಣ್ಣನವರ ಅವರ ಪ್ರಥಮ ಪುಣ್ಯಸ್ಮರಣೆ ನಿಮಿತ್ತ ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಗುರುನಮನ ಸಮಾರಂಭದಲ್ಲಿ ಬಸವರಾಜ ಅವರ ಪುತ್ರಿ ಡಾ.ಉಮಾ ಬಳಿಗಾರ ರಚನೆಯ ‘ಜಗದಗಲದ ತಂದೆ’ ಕವನ ಸಂಕಲನವನ್ನು ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಬಿಡುಗಡೆಗೊಳಿಸಿದರು.
ಮಾಜಿ ಶಾಸಕ ಶಿವರಾಜ ಸಜ್ಜನರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಶಂಭು ಬಳಿಗಾರ, ಸತೀಶ ಕುಲಕರ್ಣಿ, ವಾಣಿಜ್ಯ ತೆರಿಗೆ ಅಧಿಕಾರಿ ಭುವನೇಶ್ವರಿ ಪಾಟೀಲ ಮಾತನಾಡಿದರು. ಶಿವಕುಮಾರ ಅಪ್ಪಣ್ಣನವರ ಕುಟುಂಬದಿಂದ ಬಡ ಮಕ್ಕಳಿಗೆ ನೊಟ್‌ಪುಸ್ತಕ ವಿತರಿಸಲಾಯಿತು.
ಶಿಕ್ಷಕ ಸಿ.ಎಸ್.ಮರಳಿಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮನೋವೈದ್ಯ ಡಾ.ವಿಜಯಕುಮಾರ ಬಳಿಗಾರ ಸ್ವಾಗತಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ಬಿ.ಬಸವರಾಜ, ನಿವೃತ್ತ ಶಿಕ್ಷಕ ಎಚ್.ಆರ್.ಹೊಸಮನಿ, ನಿಶಾಂತ ಬಳಿಗಾರ, ನಾಗರಾಜ ನಡುವಿನಮಠ, ಸುನೀಲ ಮಳ್ಳೆಪ್ಪನವರ, ಮಹಾಂತೇಶ ಹಿರೇಮಠ, ಮತ್ತಿತರರು ಉಪಸ್ಥಿತರಿದ್ದರು.