ಡಾ.ಮಹದೇವ ಬಣಕಾರ ಸಾಂಸ್ಕೃತಿಕ ಭವನಕ್ಕೆ ಶಂಕುಸ್ಥಾಪನೆ

30 HVR 6
Published on

ಹಾವೇರಿ: ನಗರದ ಯುವ ಚಳುವಳಿ ಸಂಘಟನಾಕಾರ ಡಾ.ಮಹದೇವ ಬಣಕಾರ ಅವರ ಸ್ಮರಣಾರ್ಥವಾಗಿ ಅಂದಾಜು ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿರುವ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಜು.1ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯೋಜನೆಯಡಿ ಎರಡು ಕೋಟಿ ವೆಚ್ಚದಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಅನುಮೋದನೆ ನೀಡಿ ಈಗಾಗಲೇ ಒಂದು ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಬಸವೇಶ್ವರ ನಗರ ಸಿ ಬ್ಲಾಕ್‌ನಲ್ಲಿರುವ 4,428 ಚದರ ಅಡಿ ನಿವೇಶನದಲ್ಲಿ ಸುಸಜ್ಜಿತ ಸಾಂಸ್ಕೃತಿಕ ಭವನಕ್ಕೆ ನೀಲ ನಕ್ಷೆ ತಯಾರಿಸಲಾಗಿದೆ. ಎರಡು ಸಾವಿರ ಚದರಡಿ ನೆಲಮಹಡಿ, 120 ಚದರಡಿ ಸ್ಟೋರ್‌ರೂಂ, 368 ಚದರಡಿ ಎರಡು ಗ್ರೀನ್ ರೂಂಗಳು, 80 ಚದರಡಿ ಕಚೇರಿ ರೂಂ ಹಾಗೂ 937 ಚದರಡಿಯ ಸುಸಜ್ಜಿತ ಗ್ರಂಥಾಲಯವನ್ನು ಈ ಯೋಜನೆ ಒಳಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net