ಧೀಮಂತ ನಾಯಕ ಡಾ.ಮಹಾದೇವ ಬಣಕಾರ; ಕಸಾಪ ತಾಲೂಕಾಧ್ಯಕ್ಷ ವೈ.ಬಿ.ಆಲದಕಟ್ಟಿ

6 HVR 3
Published on

ಹಾವೇರಿ: ಡಾ.ಮಹಾದೇವ ಬಣಕಾರ ಅವರು ರಾಜಕಾರಣಿಯಾಗಿ, ಸಾಮಾಜಿಕ ಚಿಂತಕರಾಗಿ, ವಿಮರ್ಶಕರಾಗಿ, ನಾಟಕ ರಚಿಸಿ ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದ ದೀಮಂತ ನಾಯಕ ಎಂದು ಕಸಾಪ ತಾಲೂಕಾಧ್ಯಕ್ಷ ವೈ.ಬಿ.ಆಲದಕಟ್ಟಿ ಹೇಳಿದರು.
ಡಾ.ಮಹಾದೇವ ಬಣಕಾರ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಡಾ.ಮಹಾದೇವ ಬಣಕಾರ ಅವರ 91ನೇ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು.
3,000ಕ್ಕೂ ಹೆಚ್ಚು ವಚನಗಳನ್ನು ರಚಿಸಿ ಶ್ರೀ ಶಿವಕುಮಾರ ಸಾಣಿಹಳ್ಳಿ ಪ್ರಭುಗಳ ಅಂಕಿತ ನಾಮ ಇಟ್ಟುಕೊಂಡು ಸರಳತೆ, ಮುಗ್ದತೆಯ ಭಾವನೆಗಳನ್ನು ಅಳವಡಿಸಿಕೊಂಡಿದ್ದರು. 1932ರಂದು ಮೋಟೆಬೆನ್ನೂರಿನಲ್ಲಿ ಜನಿಸಿದ ಬಣಕಾರರು ಕೇವಲ 4ನೇ ತರಗತಿವರೆಗೆ ಓದಿದ್ದರೂ ರಾಷ್ಟ್ರಕ್ಕೆ ಅದ್ಬುತ ಕೊಡುಗೆ ನೀಡಿದರು ಎಂದರು.
ಎಂ.ಎಸ್. ಕೋರಿಶಟ್ಟರ ಅಧ್ಯಕ್ಷತೆ ವಹಿಸಿದ್ದರು. ಜಗದೀಶ ಬಸೆಗಣ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹುಬ್ಬಳ್ಳಿ, ಸದಸ್ಯರಾದ ಪ್ರಕಾಶ ಹಾವೇರಿ, ಮಾಲತೇಶ ಅಂಗೂರ, ನಿವೃತ್ತ ಇಂಜನೀಯರ್ ಐ.ಎಸ್.ಹಿರೇಗೌಡರ ಹಾಗೂ ಅಶೋಕ ಗದ್ದಿಗೌಡರ ಭಾಗವಹಿಸಿದ್ದರು. ಅಕ್ಕಮ್ಮ ಹಾನಗಲ್ಲ ಪ್ರಾರ್ಥಿಸಿದರು. ಸಿ.ಎಸ್.ಮರಳಿಹಳ್ಳಿ ಸ್ವಾಗತಿಸಿದರು. ಪೃಥ್ವಿರಾಜ ಬೆಟಗೇರಿ ನಿರೂಪಿಸಿದರು. ಈರಣ್ಣ ಬೆಳವಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net