ಹಾವೇರಿ ಜಿಲ್ಲಾ ಪ್ರಧಾನ ವ ಸತ್ರ ನ್ಯಾಯಾಧೀಶರಾಗಿ ಅಧಿಕಾರ ಸ್ವೀಕರಿಸಿದ ದೇವೇಂದ್ರಪ್ಪ ಬಿರಾದಾರ

21 HVR 4
Published on

ಹಾವೇರಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ವ ಸತ್ರ ನ್ಯಾಯಾಧೀಶರಾಗಿದ್ದ ದೇವೇಂದ್ರಪ್ಪ ಬಿರಾದಾರ ಪದೋನ್ನತಿ ಹೊಂದಿ, ಹಾವೇರಿ ಜಿಲ್ಲಾ ಪ್ರಧಾನ ವ ಸತ್ರ ನ್ಯಾಯಾಧೀಶರಾಗಿ ಅಧಿಕಾರ ಸ್ವೀಕರಿಸಿದರು. ಈ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲಾ ವಕೀಲರ ಸಂಘದಿಂದ ಹಾವೇರಿಯ ವಕೀಲರ ಸಂಘದಲ್ಲಿ ಶುಕ್ರವಾರ ನ್ಯಾಯಾಧೀಶರನ್ನು ಸನ್ಮಾನಿಸಿ, ಸ್ವಾಗತಿಸಲಾಯಿತು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಎಚ್ ಜತ್ತಿ, ಕಾರ್ಯದರ್ಶಿ ಪಿ.ಎಸ್ ಹೆಬ್ಬಾಳ, ಉಪಾಧ್ಯಕ್ಷ ಸಿ.ಪಿ ಜಾವಗಲ್ಲ, ಸಹ ಕಾರ್ಯದರ್ಶಿ ಎನ್.ಎಸ್ ಕಾಳೆ, ಆರ್.ಎಚ್ ತಂಗೂಡರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net