

ಹಾವೇರಿ: ಹೆಲ್ಪ್ ಎಜುಕೇಶನ್ ಆ್ಯಂಡ್ ವೆಲ್‌ಫೇರ್ ಸೊಸೈಟಿ ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರನ್ನು ಸನ್ಮಾನಿಸಲಾಯಿತು.
ಜಿ.ಆರ್.ಯಲವದಹಳ್ಳಿ ಮಾತನಾಡಿ, ವೈದ್ಯೋ ನಾರಾಯಣೋ ಹರಿ ಎಂಬ ಮಾತಿಗೆ ಬದ್ಧವಾಗಿ ವೈದ್ಯರು, ವೈದ್ಯಕೀಯ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ಇದರಿಂದ ಸ್ವಸ್ಥ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ. ಎಲ್ಲರೂ ಒಂದಾಗಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡೋಣ ಎಂದರು.
ಸ್ಥಾನಿಕ ವೈದ್ಯಾಧಿಕಾರಿ ಡಾ.ಪರಸಪ್ಪ ಚುರ್ಚಿಹಾಳ, ನೇತ್ರತಜ್ಞ ಡಾ.ನಾಗೇಂದ್ರಪ್ಪ, ಶಸ್ತ್ರಚಿಕಿತ್ಸಕ ಡಾ.ನಿರಂಜನ, ಡಾ.ಗೌಸ್‌ಮೋಹಿದ್ದೀನ್ ತಾಂಬೂಳಿ, ಹೆಲ್ಪ್ ಎಜುಕೇಶನ್ ಆ್ಯಂಡ್ ವೆಲ್‌ಫೇರ್ ಸೊಸೈಟಿ ಅಧ್ಯಕ್ಷ ಹಜರತ್‌ಅಲಿ ಮೇಲ್ಮುರಿ, ಉಪಾಧ್ಯಕ್ಷ ಸಾಧಿಕ್ ಮೇಲ್ಮುರಿ, ಕಾರ್ಯದರ್ಶಿ ಗರೀಬಸಾಬ ಕಳ್ಳಿಹಾಳ, ಅಬ್ದುಲ್‌ಖಾದರ್ ಧಾರವಾಡ, ಹಬಿಬುಲ್ಲಾ ಕಳ್ಳಿಹಾಳ, ಇತರರಿದ್ದರು.