ನಾನು ಕಾಗದ ಹರಿದು ಹಾಕಿಲ್ಲ; ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಸ್ಪಷ್ಟನೆ

Rudrappa Lamani
Published on

ಹಾವೇರಿ: ನಾನು ಕಾಗದ ಹರಿದು ಹಾಕಿದ್ದೇನೆ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದು, ನಾನು ಯಾವುದೇ ಕಾಗದ ಹರಿದು ಹಾಕಿಲ್ಲ. ಬದಲಾಗಿ, ಕಾಗದ ಎಸೆದ ಶಾಸಕರಿಗೆ ಅವರ ಜಾಗದಲ್ಲಿ ಕೂರುವಂತೆ ಸೂಚಿಸಿದ್ದೆ. ಘಟನೆ ಕುರಿತು ರಾಜ್ಯಪಾಲರಿಗೆ ವಿವರಿಸಿದ್ದೇನೆ ಎಂದು ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಸ್ಪಷ್ಟಪಡಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ನನ್ನ ಮೇಲೆ ಕಾಗದ ಹರಿದು ಬಿಜೆಪಿ ಶಾಸಕರು ಎಸೆದು, ಉಪಸಭಾಧ್ಯಕ್ಷ ಸ್ಥಾನಕ್ಕೆ ಅವಮಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಸದನ ಮುಗಿಯುವವರೆಗೆ ಅಮಾನತು ಮಾಡಲಾಗಿದೆ. ಇಂತಹ ಘಟನೆ ನಡೆದದ್ದು ಬೇಸರ ಮೂಡಿಸಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net