ಕ್ರಿಸ್‌ಮಸ್ ಆಚರಣೆಗೆ ಯಾಲಕ್ಕಿ ನಗರಿ ಸಜ್ಜು; ಚರ್ಚ್‌ಗಳಿಗೆ ದೀಪಾಲಂಕಾರ, ಕೇಕ್ ವ್ಯಾಪಾರ ಬಲು ಜೋರು

24 HVR 7 B
Published on

ಹಾವೇರಿ: ಯೇಸು ಕ್ರಿಸ್ತನ ಜನ್ಮದಿನದ ಅಂಗವಾಗಿ ಡಿ.25ರಂದು ಕ್ರಿಸ್‌ಮಸ್ ಹಬ್ಬ ಆಚರಿಸಲು ಯಾಲಕ್ಕಿ ನಗರಿ ಸಜ್ಜಾಗಿದ್ದು, ನಗರದ ಚರ್ಚ್‌ಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಬೇಕರಿಗಳಲ್ಲಿ ಕೇಕ್ ವ್ಯಾಪಾರ ಬಲು ಜೋರಾಗಿ ನಡೆದಿದೆ.

ಹಬ್ಬ ಆಚರಣೆಗಾಗಿ ಕ್ರೈಸ್ತ ಸಮುದಾಯದವರು ಸಕಲ ರೀತಿಯ ಸಿದ್ಧತೆ ನಡೆಸಿದ್ದಾರೆ. ನಗರದ ಚರ್ಚ್‌ಗಳು, ಧಾರ್ಮಿಕ ಕೇಂದ್ರಗಳು, ಮನೆಗಳು, ಸುಣ್ಣ, ಬಣ್ಣಗಳಿಂದ ಕಂಗೊಳಿಸುತ್ತಿವೆ. ಹಲವೆಡೆ ಯೇಸುಕ್ರಿಸ್ತರು ಜನಿಸಿದ ಗೋದಲಿ ನಿರ್ಮಿಸಲಾಗಿದೆ.

ಹಬ್ಬದ ಅಂಗವಾಗಿ ನಗರದ ಅಂಗಡಿಗಳಲ್ಲಿ ಮಂಗಳವಾರ ಕ್ರಿಸ್‌ಮಸ್ ಟ್ರೀ, ಡೆಕಾರೇಶನ್ ಹೂವು, ನಕ್ಷತ್ರಗಳು, ಶುಭ ಸಂಕೇತದ ಗಂಟೆ, ರಿಬ್ಬನ್, ಬಣ್ಣದ ಕ್ಯಾಲೆಂಡರ್‌ಗಳು, ಅಲಂಕಾರಿಕ ದೀಪಗಳ ಖರೀದಿ ಕಂಡುಬಂತು.

ಬೇಕರಿಗಳಲ್ಲಿ ವಿವಿಧ ರೀತಿಯ ಕೇಕ್‌ಗಳನ್ನು ತಯಾರಿ ಮಾರಾಟ ಮಾಡಲಾಗುತ್ತಿದೆ. ಕ್ರಿಸ್‌ಮಸ್ ಸ್ಪೆಷಲ್ ಕೇಕ್, ಪ್ಲಮ್ ಕೇಕ್, ಫ್ರೂಟ್ ಕೇಕ್, ಚಾಕಲೇಟ್ ಕೇಕ್, ಮಿಕ್ಸ್ ಕೇಕ್, ಸಲಾಡ್ ಕೇಕ್, ಸೇರಿ ವಿವಿಧ ಮಾದರಿಯ ಕೇಕ್‌ಗಳು ಆಕರ್ಷಿಸುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net