ದೇವರಗುಡ್ಡ, ಮೈಲಾರ ಜಾತ್ರೆಗೆ ವಿಶೇಷ ಸಾರಿಗೆ; 23ರಿಂದ 27ರವರೆಗೆ ಜಾತ್ರಾ ವೈಭವದ ಮಹೋತ್ಸವ

Published on

ಹಾವೇರಿ: ಸುಕ್ಷೇತ್ರ ದೇವರಗುಡ್ಡ ಶ್ರೀ ಮಾಲತೇಶ ಸ್ವಾಮಿ ಹಾಗೂ ಶ್ರೀ ಮೈಲಾರ ಲಿಂಗೇಶ್ವರ ಸ್ವಾಮಿಯ ಜಾತ್ರೆ ಫೆ.23ರಿಂದ 27 ರವರೆಗೆ ವೈಭವದಿಂದ ಜರುಗಲಿದೆ. ಜಾತ್ರೆಗೆ ಹೆಚ್ಚುವರಿ ಜಾತ್ರಾ ವಿಶೇಷ ಸಾರಿಗೆಗಳನ್ನು ಈ ವಿಭಾಗದಿಂದ ಕಾರ್ಯಾಚರಣೆ ಮಾಡಲಾಗುತ್ತದೆ ಎಂದು ವಾ.ಕ.ರ.ಸಾ.ಸಂಸ್ಥೆ ಹಾವೇರಿ ವಿಭಾಗದ ವಿಭಾಗೀಯ ನಿಂತ್ರಣಾಧಿಕಾರಿ ಶಶಿಧರ ಮರಿದೇವರಮಠತಿಳಿಸಿದ್ದಾರೆ.
ಜಾತ್ರೆಗೆ ರಾಜ್ಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕ್ತಾಧಿಗಳು ಸೇರಲಿದ್ದು, ಕ್ತಾಧಿಗಳಿಗೆ ವ್ಯವಸ್ಥಿತವಾದ ಸಾರಿಗೆ ಸೌಕರ್ಯ ಒದಗಿಸುವ ದೃಷ್ಟಿಯಿಂದ ಹಾವೇರಿ, ರಾಣೆಬೆನ್ನೂರ, ಗುತ್ತಲ, ಬ್ಯಾಡಗಿ ಹಾಗೂ ಹೊಸರಿತ್ತಿ ಬಸ್ ನಿಲ್ದಾಣಗಳಿಂದ ದೇವರಗುಡ್ಡ-ಮೈಲಾರಕ್ಕೆ ಹೋಗಿಬರಲು ಹೆಚ್ಚುವರಿ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net