ಹಾವೇರಿಯಲ್ಲಿ ರಾಜ್ಯಮಟ್ಟದ ಟೇಕ್ವಾಂಡೊ ಟೂರ್ನಿಗೆ ಚಾಲನೆ

4 Taekwondo
Published on

ಹಾವೇರಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಟೇಕ್ವಾಂಡೊ ಟೂರ್ನಿಗೆ ಬುಧವಾರ ಸಂಜೆ ಚಾಲನೆ ನೀಡಲಾಗಿದ್ದು, ಡಿ.5ರಂದು ಸ್ಪರ್ಧೆಗಳು ನಡೆಯಲಿವೆ.

ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ವತಿಯಿಂದ ಹಮ್ಮಿಕೊಂಡಿರುವ ಟೂರ್ನಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಪದವಿಪೂರ್ವ ಕಾಲೇಜ್‌ಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.

ಬುಧವಾರ ಹಾವೇರಿಗೆ ಬಂದ ವಿದ್ಯಾರ್ಥಿಗಳು, ಕ್ರೀಡಾಂಗಣದಲ್ಲಿ ತಮ್ಮ ಹೆಸರು ನೋಂದಾಯಿಸಿದರು. ವಿದ್ಯಾರ್ಥಿಗಳು ಹಾಗೂ ತರಬೇತುದಾರರು ಉಳಿದುಕೊಳ್ಳಲು ಇಲಾಖೆಯಿಂದ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಡಿಡಿಪಿಯು ಡಾ.ಎಚ್.ಉಮೇಶಪ್ಪ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net