ಸುಂದರ ಕೈಬರಹದಿಂದ ವ್ಯಕ್ತಿತ್ವ ಅನಾವರಣ; ಬರವಣಿಗೆ ಕೌಶಲಾಭಿವೃದ್ಧಿ ಕಾರ್ಯಾಗಾರದಲ್ಲಿ ಡಿಡಿಪಿಐ ಸುರೇಶ ಹುಗ್ಗಿ ಹೇಳಿಕೆ

18 HVR 5
Published on

ಹಾವೇರಿ: ಕೈಬರಹವು ವ್ಯಕ್ತಿಯ ವ್ಯಕ್ತಿತ್ವದ ಕನ್ನಡಿಯಾಗಿದೆ. ಸುಂದರವಾದ ಕೈಬರಹ ಮತ್ತು ಶುದ್ಧ ಬರಹಗಳು ನಮ್ಮ ವ್ಯಕ್ತಿತ್ವವನ್ನು ತೆರೆದಿಡುವ ಜತೆಗೆ ನಮ್ಮ ಮನೋಸ್ಥಿಯನ್ನು ಅನಾವರಣಗೊಳಿಸುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಟಿಎಂಇ ಬಿಎಡ್ ಕಾಲೇಜ್‌ನಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಡಯಟ್ ಕಾಲೇಜ್ ವತಿಯಿಂದ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ಆಯೋಜಿಸಿದ್ದ ‘ಕೈಬರಹ ಸುಧಾರಣೆ ಹಾಗೂ ಬರವಣಿಗೆಯ ಕೌಶಲಾಭಿವೃದ್ಧಿ’ ವಿಷಯಗಳ ಕುರಿತ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಡಯಟ್ ಪ್ರಾಂಶುಪಾಲ ಗಿರೀಶ ಪದಕಿ ಮಾತನಾಡಿ, ಸುಂದರ ಬರಹವು ನಮ್ಮ ಅಂತರಂಗದ ಪ್ರತೀಕವಾಗಿದೆ. ಕೈಬರಹವು ವ್ಯಕ್ತಿಯ ಸಾಮಾಜಿಕ ಸಂಬಂಧಗಳ ವಿಶ್ಲೇಷಣೆಯೂ ಆಗಿದೆ. ಅಕ್ಷರಗಳಲ್ಲಿ ಸೌಂದರ್ ಪ್ರಜ್ಞೆ ಅಡಕವಾಗಿರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಾವೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ, ಡಯಟ್ ಉಪನ್ಯಾಸಕರಾದ ಶೇಖರ ಹಂಚಿನಮನಿ, ಸಂಪನ್ಮೂಲ ವ್ಯಕ್ತಿ ದೀಪಕ ಬದಾಮಿ, ಕಾರ್ಯಕ್ರಮ ಸಂಯೋಜಕರಾದ ಬಾಬು ಸುಣಗಾರ, ಲಿಂಗರಾಜ ಸೊಟ್ಟಪ್ಪನವರ, ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net