

ಹಾವೇರಿ: ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8,95,366 ಪುರುಷರು, 8,82,430 ಮಹಿಳೆಯರು ಹಾಗೂ 81 ಇತರರು ಸೇರಿ 17,77,877 ಮತದಾರಿದ್ದಾರೆ (16-03-2024ರಂತೆ). ಈ ಪೈಕಿ 85 ವರ್ಷ ಮೇಲ್ಪಟ್ಟ 15,521 ಮತದಾರರು, 27,434 ವಿಕಲಚೇತನ ಮತದಾರರು, 1,607 ಸೇವಾ ಮತದಾರರು ಹಾಗೂ 18 ರಿಂದ 19 ವರ್ಷದ 50,658 ಮತದಾರರಿದ್ದಾರೆ. ಈ ಪೈಕಿ 85 ವರ್ಷ ಮೇಲ್ಪಟ್ಟ 15,521 ಮತದಾರರು ಹಾಗೂ ವಿಕಲಚೇತನ 27,434 ಮತದಾರರು ಒಳಗೊಂಡಂತೆ 42,955 ಮತದಾರರಿಗೆ ಅವರು ಬಯಸಿದರೆ ಮನೆಯಲ್ಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುವುದು. ವರ ಮನೆಗೆ ಹೋಗಿ ಮೊದಲೇ ಅವರಿಗೆ ಮತದಾನದ ಕೋರಿಕೆ ಪತ್ರ ನೀಡಲಾಗುವುದು. ಮನೆಯಲ್ಲೇ ಮತದಾನ ಮಾಡಲು ಬಯಸಿ ನಮೂನೆಯನ್ನು ಭರ್ತಿಮಾಡಿ ಸಹಿ ಮಾಡಿಕೊಟ್ಟರೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ ಮೂರ್ತಿ ಹೇಳಿದರು.