ಚಂದಾಪೂರ ಕೆರೆ ವೀಕ್ಷಿಸಿದ ಡಿಸಿ

26 HVR 7
Published on

ಶಿಗ್ಗಾಂವಿ: ತಾಲೂಕು ಚಂದಾಪೂರ ಗ್ರಾಮದ ಮಾನಿಕೆರೆಗೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಶುಕ್ರವಾರ ಭೇಟಿ ನೀಡಿ, ಕೆರೆ ಒಡ್ಡು ಒಡೆದಿರುವುದನ್ನು ಪರಿಶೀಲಿಸಿದರು.
ಚಂದಾಪುರ ಗ್ರಾಮದ ಸರ್ವೇ ನಂಬರ್ 142 ಮತ್ತು 143 ಕ್ಷೇತ್ರದ 12 ಎಕರೆ 35 ಗುಂಟೆ ಕೆರೆ ಸತತ ಮಳೆಯಿಂದ ತುಂಬಿದೆ. ಕೆರೆಯ ಒಡ್ಡು ಒಡೆದು ಹೋಗಿದೆ. ಸ್ಥಳ ಪರಿಶೀಲನೆ ಮಾಡಿದ ಡಿಸಿ ತಕ್ಷಣ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಕ್ಷಯ ಶ್ರೀಧರ, ಶಿಗ್ಗಾಂವಿ ತಹಸೀಲ್ದಾರ ಸಂತೋಷ ಹಿರೇಮಠ ಹಾಗೂ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net