ಹಾವೇರಿ ಸಮೀಕ್ಷೆ; ಮೊದಲ ದಿನ 681 ಮನೆಗಳ ಸರ್ವೇ ಪೂರ್ಣ; ಡಿಸಿ ಡಾ.ವಿಜಯಮಹಾಂತೇಶ ದಾನಮ್ಮನವರ ಮಾಹಿತಿ

22 HVR 5
Published on

ಹಾವೇರಿ: ರಾಜ್ಯದಲ್ಲಿ ಮೊದಲ ದಿನ 2,767 ಮನೆಗಳ ಸಮೀಕ್ಷೆ ನಡೆದಿದ್ದು, ಜಿಲ್ಲೆಯಲ್ಲಿ 681 ಮನೆಗಳ ಸರ್ವೇ ಪೂರ್ಣಗೊಂಡಿದೆ. ಈ ಮೂಲಕ ರಾಜ್ಯದಲ್ಲೇ ಹೆಚ್ಚು ಸಮೀಕ್ಷೆ ಮಾಡಿದ ಜಿಲ್ಲೆಗಳ ಪಟ್ಟಿಯಲ್ಲಿ ಹಾವೇರಿ ಜಿಲ್ಲೆ ಮೊದಲ ಸಾಲಿನಲ್ಲಿ ಸ್ಥಾನ ಪಡೆದಿದೆ.

ಸಮೀಕ್ಷೆ ನಡೆಸುವ ಅಧಿಕಾರಿ, ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಕಾರದಿಂದ ಮೊದಲ ದಿನವೇ ಉತ್ತಮವಾದ ಸಮೀಕ್ಷೆ ಕಾರ್ಯ ನಡೆಸಲಾಗಿದೆ. ಬ್ಯಾಡಗಿ ತಾಲೂಕು 157, ಹಾನಗಲ್ಲ 106, ಹಾವೇರಿ 150, ಹಿರೇಕೆರೂರ 14, ರಟ್ಟಿಹಳ್ಳಿ 5, ರಾಣೆಬೆನ್ನೂರ 52, ಶಿಗ್ಗಾಂವಿ 78, ಸವಣೂರ ತಾಲೂಕಲ್ಲಿ 119 ಮನೆಗಳ ಸರ್ವೇ ಕಾರ್ಯ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net