ಕೆರೆಗಳಿಗೆ ನೀರು ಹರಿಸಿ, ಅಂತರ್ಜಲ ಮಟ್ಟ ಹೆಚ್ಚಿಸಿ; ಜಿಲ್ಲಾಡಳಿತಕ್ಕೆ ರೈತ ಸಂಘದ ಮನವಿ

12 HVR 9 B
Published on

ಹಾವೇರಿ: ಸ್ಥಳೀಯ ಜಲಸಂಪನ್ಮೂಲಗಳನ್ನು ಬಳಸಿಕೊಂಡು ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ಹರಿಸುವ ಮಹತ್ವದ ಕೆಲಸವನ್ನು ಜಿಲ್ಲಾಡಳಿತ ಈ ಕೂಡಲೇ ಆರಂಭಿಸಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕ ಆಗ್ರಹಿಸಿದೆ.
ಇಲ್ಲಿನ ದೇವಗಿರಿಯ ಜಿಲ್ಲಾಡಳಿತ ಕಚೇರಿ ಎದುರು ಸೋಮವಾರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಜಿಲ್ಲೆಯ ಜೀವನಾಡಿಗಳಾದ ತುಂಗಭದ್ರಾ, ವರದಾ, ಕುಮಧ್ವತಿ ಹಾಗೂ ಧಮಾ ನದಿ ಮತ್ತು ಬಾಜೀರಾಯನ ಹಳ್ಳಗಳ ಮೂಲಕ ಎಲ್ಲ ಕೆರೆಗಳನ್ನು ತುಂಬಿಸಬೇಕು. ಜತೆಗೆ ಜಿಲ್ಲೆಯ ಎಲ್ಲ ಏತ ನೀರಾವರಿಗಳ ಕಾಮಗಾರಿಯನ್ನು ವೇಗವಾಗಿ ನಡೆಸಿ ಪೂರ್ಣಗೊಳಿಸಬೇಕು. ಈ ಮೂಲಕ ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಳ ಹಾಗೂ ನೀರಾವರಿಗೆ ಪ್ರೋತ್ಸಾಹ ನೀಡಬೇಕು. ಇದರಿಂದ ರೈತರ ಆತ್ಮಹತ್ಯೆ ತಾನಾಗಿಯೇ ನಿಲ್ಲುತ್ತವೆ. ರೈತರು ಆರ್ಥಿಕವಾಗಿ ಸದೃಢರಾಗುತ್ತಾರೆ ಎಂದು ಮನವಿ ಮಾಡಿಕೊಂಡರು.
ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ ಬಾರ್ಕಿ, ರಾಮಣ್ಣ ಬಸಾಪುರ, ಬಸವರಾಜ ದೇವಗಿರಿ, ಜಾಕೀರ್‌ಅಹ್ಮದ್ ಪರಾಶ್, ಖಾಸೀಂಸಾಬ ನಾನಾಮಲ್ಲಿಕ್, ಇಸ್ಮಾಯಿಲ್ ಸಾಬ್ ಹಳದಿ, ಕರಿಯಪ್ಪ ಆಲೂರು, ಶಿವಪ್ಪ ಗಬ್ಬೂರ, ರಿಯಾಜ್ ಅಹ್ಮದ್ ಮುಳಗುಂದ, ಪರಶುರಾಮ ಈಳಗೇರ, ರಾಮಣ್ಣ ಅಗಸರ, ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net