ನಗರ ಸ್ಥಳೀಯ ಸಂಸ್ಥೆಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆಗೆ ಅಧಿಕಾರಿಗಳ ನೇಮಕ

Published on

ಹಾವೇರಿ: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ಜರುಗಿಸಲು ಚುನಾವಣಾಧಿಕಾರಿ ನೇಮಕ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ಹಾವೇರಿ ಹಾಗೂ ರಾಣೆಬೆನ್ನೂರ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಗೆ ಹಾವೇರಿ ಉಪ ವಿಭಾಗಾಧಿಕಾರಿ, ಶಿಗ್ಗಾಂವಿ ಹಾಗೂ ಬಂಕಾಪುರ ಪುರಸಭೆಗೆ ಶಿಗ್ಗಾಂವಿ ತಹಸೀಲ್ದಾರ್, ಹಾನಗಲ್ಲ ಪುರಸಭೆಗೆ ಹಾನಗಲ್ಲ ತಹಸೀಲ್ದಾರ್, ಸವಣೂರ ಪುರಸಭೆಗೆ ಸವಣೂರ ತಹಸೀಲ್ದಾರ್, ಗುತ್ತಲ ಪಟ್ಟಣ ಪಂಚಾಯಿತಿಗೆ ಹಾವೇರಿ ತಹಸೀಲ್ದಾರ್, ಹಿರೇಕೆರೂರ ಪಟ್ಟಣ ಪಂಚಾಯಿತಿಗೆ ಹಿರೇಕೆರೂರ ತಹಸೀಲ್ದಾರ್ ಹಾಗೂ ಬ್ಯಾಡಗಿ ಪುರಸಭೆಗೆ ಬ್ಯಾಡಗಿ ತಹಸೀಲ್ದಾರ್ ಅವರನ್ನು ಚುನಾವಣಾಧಿಕಾರಿಯಾಗಿ ನೇಮಕ ಮಾಡಿ ಡಿಸಿ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net