10 ರೂಪಾಯಿ ನಾಣ್ಯಗಳನ್ನು ಬಳಸಬಹುದು; ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಮಾಹಿತಿ

10 Rs coin
Published on

ಹಾವೇರಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಅಧಿಕೃತವಾಗಿ ಮುದ್ರಿಸಲಾಗಿರುವ 10 ರೂಪಾಯಿ ನಾಣ್ಯಗಳು ಚಲಾವಣೆಯಲ್ಲಿದ್ದು, ಎಲ್ಲರೂ ತಮ್ಮ ದಿನನಿತ್ಯದ ವಹಿವಾಟಿನಲ್ಲಿ ಯಾವುದೇ ಸಂಶವಿಲ್ಲದೇ ಬಳಸಬಹುದು ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದರು.
ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಭೆ ನಡೆಸಿದ ಅವರು, ಆರ್.ಬಿ.ಐ. 10 ರೂ. ನಾಣ್ಯಗಳನ್ನು ನಿಷೇಧಿಸಿದೆ ಎಂದು ಸುಳ್ಳು ವದಂತಿಗಳು ಹರಿದಾಡುತ್ತಿರುವ ಪರಿಣಾಮ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ. ಆದರೆ, ಕೇಂದ್ರ ಸರ್ಕಾರವಾಗಲಿ, ಆರ್.ಬಿ.ಐ.ಯಾಗಲಿ 10 ರೂ. ನಾಣ್ಯಗಳನ್ನು ನಿಷೇಧಿಸಿಲ್ಲ. ಚಲಾವಣೆಯನ್ನು ಹಿಂಪಡೆದಿಲ್ಲ. ಸಾರ್ವಜನಿಕರು ಸುಳ್ಳು ವಂದತಿಗಳನ್ನು ನಂಬದೇ 10 ರೂ. ನಾಣ್ಯಗಳನ್ನು ಸ್ವೀಕರಿಸಬಹುದು ಎಂದು ಸ್ಪಷ್ಟಪಡಿಸಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅಣ್ಣಯ್ಯ ಮಾತನಾಡಿ, ಈ ನಾಣ್ಯಗಳನ್ನು ಬಳಸುವುದರಿಂದ ಚಿಲ್ಲರೆ ಸಮಸ್ಯೆಗೆ ಪರಿಹಾರ ಸಿಗಲಿದೆ. 10 ರೂ. ನಾಣ್ಯಗಳನ್ನು ಸ್ವೀಕರಿಸದೇ ಇರುವುದು ನಾಣ್ಯ ಕಾಯ್ದೆ 2011ರ ಸೆಕ್ಷನ್ 6(1) ಸ್ಷಷ್ಟ ಉಲ್ಲಂಘನೆಯಾಗುತ್ತದೆ. ಆದ್ದರಿಂದ ಜಿಲ್ಲೆಯ ಎಲ್ಲ ಬ್ಯಾಂಕುಗಳ ವ್ಯವಸ್ಥಾಪಕರು, ಸಾರ್ವಜನಿಕರು ಈ ನಾಣ್ಯಗಳನ್ನು ಭಯಮುಕ್ತವಾಗಿ ಸ್ವೀಕರಿಸಬಹು ಹಾಗೂ ಬಳಸಬಹುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net