ಹಾವೇರಿ: ಜಿಲ್ಲೆಯ ಕೆಲ ತಾಲೂಕಿನಲ್ಲಿ ಗರ್ಭಿಣಿಯರು, ಅಂಗವಿಕಲರು, ನಿವೃತ್ತ್ಿ ಅಂಚಿನಲ್ಲಿರುವವರು ಹಾಗೂ ಬಿ.ಪಿ., ಶುಗರ್ ಇತರ ರೋಗದಿಂದ ಬಳಲುವವರನ್ನು ಸಮೀಕ್ಷೆಗೆ ನಿಯೋಜಿಸಲಾಗಿದೆ.
ಅಕ್ಷಾಂಶ ರೇಖಾಂಶದ ಆಧಾರದ ಮೇಲೆ ಗಣತಿಗೆ ನಿಯೋಜಿಸಲಾಗಿದೆ ಆದರೂ ಕೆಲವೆಡೆ ತಮ್ಮ ತಾಲ್ಲೂಕು ಬಿಟ್ಟು ಬೇರೆ ತಾಲೂಕಿಗೆ ನಿಯೋಜಿಸಲಾಗಿದೆ. ಹಾನಗಲ್ಲ ಶಿಕ್ಷಕರೊಬ್ಬರನ್ನು ಪಕ್ಕದ ಉ.ಕ. ಜಿಲ್ಲೆಯ ಮುಂಡಗೋಡ ತಾಲೂಕಿಗೆ ನಿಯೋಜಿಸಲಾಗಿದೆ.
ಹಾನಗಲ್ಲ ತಾಲೂಕಿನಲ್ಲಿ ಸಮೀಕ್ಷೆಗಾಗಿ 55 ವರ್ಷಕ್ಕಿಂತ ಮೇಲ್ಪಟ್ಟವರನ್ನು ನಿಯೋಜಿಸಲಾಗಿದೆ. ಮುಖ್ಯವಾಗಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿರುವ ಗ್ರಾಮವನ್ನು ಬಿಟ್ಟು ಬೇರೆ ಗ್ರಾಮಗಳಿಗೆ ನಿಯೋಜಿಸಲಾಗಿದೆ. ಇದರಿಂದಾಗಿ ಹೊರಗಡೆ ಊರಿನ ಗ್ರಾಮಸ್ಥರು ಇವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಓಟಿಪಿ ಹೇಳುತ್ತಿಲ್ಲ. ಹೀಗಾಗಿ, ಸಮೀಕ್ಷೆಗೆ ಹಿನ್ನಡೆಯಗುತ್ತಿದೆ.
ಆ್ಯಪ್ ಸಮಸ್ಯೆ ಜಟಿಲ:
ಆ್ಯಪ್ ತಾಂತ್ರಿಕ ದೋಷದ ಕಾರಣ ಸಮೀಕ್ಷೆ ಮತ್ತಷ್ಟು ಜಟಿಲಗೊಂಡಿದೆ. ಹಲವು ಮಾಹಿತಿಗಳು ಅಪ್‌ಲೋಡ್ ಆಗದೇ ಸಮೀಕ್ಷೆದಾರರು, ಜನರು ಪರದಾಡುವಂತಾಗಿದೆ.