1.97 ಲಕ್ಷ ರೈತರ ಖಾತೆಗೆ 37.59 ಕೋಟಿ ರೂ. ಬರ ಪರಿಹಾರ ಜಮೆ; ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಮಾಹಿತಿ

Published on

ಹಾವೇರಿ: ಪ್ರಸಕ್ತ 2023-24ನೇ ಸಾಲಿನ ಮುಂಗಾರು ಹಂಗಾಮಿನ ಬರಗಾಲ ಪರಿಹಾರವಾಗಿ ಪ್ರತಿ ರೈತರಿಗೆ ಎರಡು ಸಾವಿರ ರೂ.ನಂತೆ ಜಿಲ್ಲೆಯ 1,97,729 ರೈತರ ಖಾತೆಗೆ ಒಟ್ಟು 37,59,91,836 ರೂ. ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದ್ದಾರೆ.
ಬಾಕಿ ಉಳಿದ 25,150 ರೈತರ ಖಾತೆಗೆ ಹಂತ ಹಂತವಾಗಿ ಪರಿಹಾರ ಮೊತ್ತ ಜಮೆ ಮಾಡಲಾಗುವುದು. ರೈತರು ತಮ್ಮ ಪರಿಹಾರ ಮೊತ್ತ ಜಮೆಯಾದ ಬಗ್ಗೆ ಚ್ಟಜಿಚ್ಟ.ಚ್ಟ್ಞಠಿ.ಜಟ.ಜ್ಞಿ/ಛ್ಟಿಜ್ಚಿಛಿ92 ಲಿಂಕ್ ಮುಖಾಂತರ ಪರಿಶೀಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಮೀಪದ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಅಥವಾ ಗ್ರಾಮ ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕಾವಾರು ವಿವರ:
ಬ್ಯಾಡಗಿ ತಾಲೂಕಿನ 20,955 ರೈತರ ಖಾತೆಗೆ 3,97,55,731 ರೂ., ಹಾನಗಲ್ಲ ತಾಲೂಕಿನ 36,942 ರೈತರ ಖಾತೆಗೆ 7,03,73,264 ರೂ., ಹಾವೇರಿ ತಾಲೂಕಿನ 28,124 ರೈತರ ಖಾತೆಗೆ 5,37,49,066 ರೂ., ಹಿರೇಕೆರೂರ ತಾಲೂಕಿನ 19,367 ರೈತರ ಖಾತೆಗೆ 3,63,02,734 ರೂ., ರಾಣೆಬೆನ್ನೂರ ತಾಲೂಕಿನ 29,988 ರೈತರ ಖಾತೆಗೆ 5,73,43,356 ರೂ., ರಟ್ಟಿಹಳ್ಳಿ ತಾಲೂಕಿನ 18,801 ರೈತರ ಖಾತೆಗೆ 3,44,96,375 ರೂ., ಸವಣೂರ ತಾಲೂಕಿನ 19,113 ರೈತರ ಖಾತೆಗೆ 3,69,77,807 ರೂ. ಹಾಗೂ ಶಿಗ್ಗಾಂವಿ ತಾಲೂಕಿನ 25,039 ರೈತರ ಖಾತೆಗೆ 4,69,93,503 ರೂ. ಜಮೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net