ಹಾವೇರಿ: ಪ್ರಸಕ್ತ 2025-26ನೇ ಸಾಲಿನಲ್ಲಿ ನೈಸರ್ಗಿಕ ವಿಕೋಪಗಳಾದ ಪ್ರವಾಹ/ ಅತಿವೃಷ್ಟಿಯಿಂದ 2025ನೇ ಸಾಲಿನ ಮುಂಗಾರಿನ ಅವಧಿಯ ಆಗಸ್ಟ್‌ನಲ್ಲಿ ಜಿಲ್ಲೆಯಲ್ಲಿ ನಿರಂತರ ಮಳೆಯಿಂದ 16,682.48 ಹೆಕ್ಟೆರ್ ಕೃಷಿ ಹಾಗೂ 340.11 ಹೆಕ್ಟೆರ್ ತೋಟಗಾರಿಕೆ ಬೆಳೆ ಸೇರಿ ಒಟ್ಟು 17,022.59 ಹೆಕ್ಟೆರ್ ಪ್ರದೇಶ ಬೆಳೆಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.
ನಿರಂತರ ಮಳೆಯಿಂದ ಉಂಟಾದ ಬೆಳೆಹಾನಿಗೆ ಸಂಬಂಧಿಸಿದಂತೆ, ಕಂದಾಯ, ತೋಟಗಾರಿಕೆ, ಕೃಷಿ ಇಲಾಖೆ ಅಧಿಕಾರಿಗಳಿಂದ ಬೆಳೆ ಹಾನಿಯ ಕುರಿತು ಜಂಟಿ ಸಮೀಕ್ಷೆ ನಡೆಸಲಾಗಿದೆ. ತಾಲೂಕುವಾರು ಬೆಳೆಹಾನಿ ಕ್ಷೇತ್ರದ ವಿವರಗಳನ್ನು ಜಿಲ್ಲೆಯ ಎಲ್ಲ ತಹಸೀಲ್ದಾರರು ವರದಿ ಸಲ್ಲಿಸಿದ್ದಾರೆ.
ಜಂಟಿ ಸಮೀಕ್ಷೆಯ ಪರಿಶೀಲನಾ ವರದಿಯಂತೆ ಜಿಲ್ಲೆಯ ಎಲ್ಲ ತಾಲೂಕಿನಿಂದ ಒಟ್ಟು 17,022.59 ಹೆಕ್ಟರ್ ಕ್ಷೇತ್ರಗಳಲ್ಲಿ ಬೆಳ ಹಾನಿಯಾದ ರೈತರ ಕರಡು ಪಟ್ಟಿಯನ್ನು ಜಿಲ್ಲಾಧಿಕಾರಿಗಳ ಕಚೇರಿ, ಉಪವಿಭಾಗಾಧಿಕಾರಿಯವರ ಕಚೇರಿ, ಸಂಬಂಧಿಸಿದ ತಹಸೀಲ್ದಾರ್ ಕಚೇರಿ, ಗ್ರಾಮ ಪಂಚಾಯಿತಿ ಕಚೇರಿ, ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ಅಂತರ್ಜಾಲದಲ್ಲಿ (ಠಿಠಿ://ಛ್ಟಿಜಿ.್ಞಜ್ಚಿ.ಜ್ಞಿ/ಟ್ಚ್ಠಞಛ್ಞಿಠ್ಚಿಠಿಛಿಜಟ್ಟ/ಜಿಠಿಛ್ಟಿಞಚ್ಞಜಛಿಞಛ್ಞಿಠಿ/ಜ್ಞಿಚ್ಟಜಿಛಿಠಿ) ಈಗಾಗಲೇ ಪ್ರಕಟಿಸಲಾಗಿದೆ.
ಈ ಕುರಿತು ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ ತಮ್ಮ ಲಿಖಿತ ಆಕ್ಷೇಪಣೆಗಳನ್ನು ಸಂಬಂಧಿಸಿದ ತಾಲೂಕಿನ ತಹಸೀಲ್ದಾರ್, ಕೃಷಿ, ತೋಟಗಾರಿಕಾ ಕಚೇರಿಗಳಲ್ಲಿ ಹಾಗೂ ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳಲ್ಲಿ ಸೆ.24ರಂದು ಸಂಜೆ 5 ಗಂಟೆ ಒಳಗಾಗಿ ಸಲ್ಲಿಸಬೇಕು. ಆಕ್ಷೇಪಣೆಗಳನ್ನು ನಿಯಮಾನುಸಾರ ಪರಿಶೀಲಿಸಿ ಕ್ರಮವಹಿಸಿ, ಯಾದಿಯನ್ನು ಅಂತಿಮಗೊಳಿಸಲಾಗುವುದು. ನಿಗದಿಪಡಿಸಿದ ಅವಧಿಯ ನಂತರ ಸ್ವೀಕೃತವಾಗುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಡಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕುವಾರು ವಿವರ
ಬ್ಯಾಡಗಿ ತಾಲೂಕಿನಲ್ಲಿ 6,106.72 ಹೆ. ಕೃಷಿ ಹಾಗೂ 88.43 ಹೆ. ತೋಟಗಾರಿಕೆ ಬೆಳೆ ಸೇರಿ 6,195.15 ಹೆ.ಪ್ರದೇಶ, ಹಾನಗಲ್ಲ- 2196.35 ಹೆ.ಕೃಷಿ ಹಾಗೂ 71.76 ಹೆ. ತೋಟಗಾರಿಕೆ ಬೆಳೆ ಸೇರಿ 2268.11 ಹೆ. ಪ್ರದೇಶ, ಹಾವೇರಿ- 319.45 ಹೆ. ಕೃಷಿ ಹಾಗೂ 25.52 ಹೆ. ತೋಟಗಾರಿಕೆ ಬೆಳೆ ಸೇರಿ 344.97 ಹೆ. ಪ್ರದೇಶ, ಹಿರೇಕೆರೂರ- 4893.35 ಹೆ. ಕೃಷಿ ಹಾಗೂ 94.07 ಹೆ. ತೋಟಗಾರಿಕೆ ಬೆಳೆ ಸೇರಿ 4987.42 ಹೆ. ಪ್ರದೇಶ, ರಾಣೆಬೆನ್ನೂರ 36.51 ಹೆ. ಕೃಷಿ ಹಾಗೂ 14.23 ಹೆ. ತೋಟಗಾರಿಕೆ ಬೆಳೆ ಸೇರಿ 50.74 ಹೆ. ಪ್ರದೇಶ, ರಟ್ಟಿಹಳ್ಳಿ- 1707.01 ಹೆ. ಕೃಷಿ ಹಾಗೂ 25.40 ಹೆ.ತೋಟಗಾರಿಕೆ ಬೆಳೆ ಸೇರಿ 1732.41 ಹೆ.ಪ್ರದೇಶ, ಶಿಗ್ಗಾಂವಿ- 846.99 ಹೆ.ಪ್ರದೇಶ, ಸವಣೂರ- 576.10 ಹೆ.ಕೃಷಿ ಹಾಗೂ 20.70 ಹೆ.ತೋಟಗಾರಿಕೆ ಬೆಳೆ ಸೇರಿ 596.80 ಹೆ.ಪ್ರದೇಶದಲ್ಲಿ ಬೆಳೆಹಾನಿಯಾದ ವರದಿಯಾಗಿದೆ.