

ಹಾವೇರಿ: ಜಿಲ್ಲೆಯ ಅರ್ಹ ರೈತರಿಗೆ ಕಳೆದ 2023ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಪರಿಹಾರ 156.96 ಕೋಟಿ ರೂ. ಬಿಡುಗಡೆಯಾಗಿದ್ದು, ಸರ್ಕಾರದಿಂದ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ರಘುನಂದನ ಮೂರ್ತಿ ತಿಳಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮುಂಗಾರು ಹಂಗಾಮಿನ ಬರ ಪರಸ್ಥಿತಿಯಿಂದ ಉಂಟಾದ ಬೆಳೆ ಹಾನಿಗೆ ಎಸ್.ಡಿ.ಆರ್.ಎಫ್/ ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಅರ್ಹತೆಯ ಅನುಗುಣವಾಗಿ ಈಗಾಗಲೇ ಅರ್ಹ ರೈತರಿಗೆ ಗರಿಷ್ಠ 2,000 ರೂ.ನಂತೆ ಪಾವತಿಸಿರುವ ಬೆಳಹಾನಿ ಪರಿಹಾರವನ್ನು ಪರಿಗಣನೆಗೆ ತೆಗೆದುಕೊಂಡು, ಅರ್ಹತೆಯಂತೆ ಇನ್ನುಳಿದ ಬಾಕಿ ಬೆಳೆಹಾನಿ ಪರಿಹಾರ ಮೊತ್ತವನ್ನು ಪಾವತಿಸಲು ಅನುದಾನ ಬಿಡುಗಡೆ ಮಾಡಿ ಸರ್ಕಾರದಿಂದ ಆದೇಶಿಸಲಾಗಿದೆ.
ಪರಿಹಾರ ತಂತ್ರಾಂಶದ ಮೂಲಕ ಹಂತ ಹಂತವಾಗಿ ಪರಿಹಾರ ವಿತರಣೆ ಮಾಡಲಾಗುತ್ತಿದ್ದು, ಹಾವೇರಿ ಜಿಲ್ಲೆಯಲ್ಲಿ ಈಗಾಗಲೇ ಒಟ್ಟು 1,98,455 ರೈತರಿಗೆ ಒಂದರಿಂದ ಒಂಭತ್ತು ಹಂತಗಳಲ್ಲಿ 37.73 ಕೋಟಿ ರೂ. ಪರಿಹಾರ ಜಮೆ ಮಾಡಲಾಗಿದೆ. ಹತ್ತನೇ ಹಂತದಲ್ಲಿ 119.23 ಕೋಟಿ ರೂ. ಮೊತ್ತವನ್ನು ಹಂತ ಹಂತವಾಗಿ ಪರಿಹಾರ ಜಮೆಮಾಡುವ ಕಾರ್ಯ ಪ್ರಗತಿಯಲ್ಲಿದೆ. ಹೀಗೆ ಜಿಲ್ಲೆಯ ಅರ್ಹ ರೈತರಿಗೆ 156.96 ಕೋಟಿ ರೂ. ಇನ್‌ಫುಟ್ ಸಬ್ಸಿಡಿ ಜಮೆ ಮಾಡಲು ಅನುಮೋದನೆ ನೀಡಲಾಗಿದ್ದು, ಸರ್ಕಾರದಿಂದ ನೇರವಾಗಿ ರೈತರ ಬ್ಯಾಂಕ್ ಖಾತೆಗೆಗಳಿಗೆ ಪರಿಹಾರ ಜಣ ಜಮೆ ಮಾಡಲಾಗುತ್ತಿದೆ. ಬೆಳೆ ಪರಿಹಾರ ಮಾಹಿತಿ ಕುರಿಂತೆ ರೈತರು ಈ ಕೆಳಕಂಡ ಸಹಾಯವಾಣಿ ಸಂಪರ್ಕಿಸಲು ಕೋರಲಾಗಿದೆ.
ಮಾಹಿತಿಗಾಗಿ ಸಹಾಯವಾಣಿ ಸಂಪರ್ಕಿಸಿ
ರೈತರು ಉಪವಿಭಾಗ ಹಾಗೂ ತಾಲೂಕು ಕಚೇರಿಯಲ್ಲಿ ತೆರೆಯಲಾದ ಬರ ಪರಿಹಾರ ಸಹಾಯವಾಣಿ ಕೇಂದ್ರಗಳಿಗೆ ಕಚೇರಿ ಸಮಯದಲ್ಲಿ ಭೇಟಿ ನೀಡಿ ಬೆಳೆ ಪರಿಹಾರ ಮಾಹಿತಿ ಪಡೆಯಬಹುದು. ಸಹಾಯವಾಣಿಗಳಿಗೆ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು.
08375-249102(1077) (ಜಿಲ್ಲಾಧಿಕಾರಿಗಳ ಕಚೇರಿ ಹಾವೇರಿ), 08375-297268(ಉಪ ವಿಭಾಗಾಧಿಕಾರಿಗಳ ಕಚೇರಿ ಹಾವೇರಿ), 08378-241646(ಉಪವಿಭಾಗಾಧಿಕಾರಿಗಳ ಕಚೇರಿ ಸವಣೂರ), 08375-249021(ಜಂಟಿ ನಿರ್ದೇಶಕರ ಕಾರ್ಯಾಲಯ, ಕೃಷಿ ಇಲಾಖೆ, ಹಾವೇರಿ), 08375-232445(ತಹಸೀಲ್ದಾರ ಕಚೇರಿ ಹಾವೇರಿ), 08373-260449(ತಹಸೀಲ್ದಾರ ಕಚೇರಿ ರಾಣೆಬೆನ್ನೂರ), 08375-228428(ತಹಸೀಲ್ದಾರ ಕಚೇರಿ ಬ್ಯಾಡಗಿ), 08376-282231(ತಹಸೀಲ್ದಾರ ಕಚೇರಿ ಹಿರೆಕೆರೂರ), 08376-200147 (ತಹಸೀಲ್ದಾರ ಕಚೇರಿ ರಟ್ಟಿಹಳ್ಳಿ), 08375-241626(ತಹಸೀಲ್ದಾರ ಕಚೇರಿ ಸವಣೂರ), 8147050299(ತಹಸೀಲ್ದಾರ ಕಚೇರಿ ಶಿಗ್ಗಾಂವಿ), 08379-262241(ತಹಸೀಲ್ದಾರ ಕಚೇರಿ ಹಾನಗಲ್ಲ) ಸಂಖ್ಯೆಗಳಿಗೆ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುವಂತೆ ಡಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.