

ಹಾವೇರಿ: ಜಿಲ್ಲಾ ಪಂಚಾಯಿತಿ, ಹಾವೇರಿ ತಾಲೂಕು ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಕ್ರೀಡಾ ಸಂಸ್ಥೆಗಳ ಸಹಯೋಗದಲ್ಲಿ ಪ್ರಸಕ್ತ ಸಾಲಿನ ಹಾವೇರಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಬುಧವಾರ ಹಾವೇರಿ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿತು.
ಪುರುಷರಿಗೆ ಅಥ್ಲೆಟಿಕ್ಸ್, ವಾಲಿಬಾಲ್, ಪುಟ್ಬಾಲ್, ಥ್ರೋಬಾಲ್, ಕಬಡ್ಡಿ, ಖೋಖೋ, ಯೋಗ ಹಾಗೂ ಮಹಿಳೆಯರಿಗೆ ಅಥ್ಲೆಟಿಕ್ಸ್, ವಾಲಿಬಾಲ್, ಥ್ರೋಬಾಲ್, ಕಬಡ್ಡಿ ಹಾಗೂ ಖೋಖೋ ಪಂದ್ಯಾವಳಿಗಳು ಜರುಗಿದವು. ತಾಲೂಕಿನ ಯುವಕ ಮತ್ತು ಯುವತಿಯರು ಉತ್ಸಾಹದಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಲತಾ, ಜಿಲ್ಲಾ ಹಾಕಿ ಅಸೋಯೇಷನ್ ಉಪಾಧ್ಯಕ್ಷ ರಮೇಶ ಆನವಟ್ಟಿ, ಜಿಲ್ಲಾ ಕ್ರೀಡಾಂಗಣ ಸಮಿತಿ ಸದಸ್ಯ ಸಲೀಂ ಪಟವೇಗಾರ, ದೈಹಿಕ ಶಿಕ್ಷಕ ಸಿ.ಹೊಟ್ಟೆಗೌಡ, ಉಪನ್ಯಾಸಕ ಶಿವರಾಜ ಗುಂಡೆ, ನಿವೃತ್ತ ಶಿಕ್ಷಕ ಎಂ.ಎನ್ ಚಿನ್ನಕಾಳೆ, ಇತರರು ಉಪಸ್ಥಿತರಿದ್ದರು.