ಜಿಲ್ಲೆಯಲ್ಲಿ ನವರಾತ್ರಿ ಉತ್ಸವಕ್ಕೆ ಚಾಲನೆ

3 HVR 10 A
Published on

ಹಾವೇರಿ: ಜಿಲ್ಲೆಯಾದ್ಯಂತ ನವರಾತ್ರಿ ಉತ್ಸವಕ್ಕೆ ಗುರುವಾರ ಅಧಿಕೃತ ಚಾಲನೆ ದೊರೆತಿದೆ. 9 ದಿನಗಳ ನಡೆಯುವ ಉತ್ಸವದ ಹಿನ್ನೆಲೆಯಲ್ಲಿ ವಿವಿಧೆಡೆ ದುರ್ಗಾ ಮಾತೆಯನ್ನು ಪ್ರತಿಷ್ಠಾಪಿಸಿ, ವಿಶೇಷ ಪೂಜೆ ಮಾಡಲಾಯಿತು.
ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ, ವಿವಿಧ ಸಂಘ, ಸಂಸ್ಥೆಗಳಿಂದ ಘಟ ಸ್ಥಾಪನೆಯೊಂದಿಗೆ ನವರಾತ್ರಿ ಉತ್ಸವಕ್ಕೆ ಹಸಿರುನಿಶಾನೆ ತೋರಲಾಗಿದೆ. ದೇವಿಗೆ ವಿಶೇಷ ಅಲಂಕಾರಗೈದು, ವಿಶೇಷ ಪ್ರಾರ್ಥನೆ ಮಾಡುವ ಮೂಲಕ ಭಕ್ತರು ಹಬ್ಬದಲ್ಲಿ ಮಿಂದಿದ್ದಾರೆ. ಇಲ್ಲಿನ ಶಿವಾಜಿ ನಗರದ ಪಿಬಿ ರಸ್ತೆಯ ವಡ್ಡಮ್ಮ ದೇವಿ, ರೈಲು ನಿಲ್ದಾಣದ ಬಳಿಯ ನವದುರ್ಗೆಯರ ದೇವಸ್ಥಾನ, ಯಾಲಕ್ಕಿ ಓಣಿಯಲ್ಲಿ ನವರಾತ್ರಿ ಸಂಭ್ರಮ ಮನೆ ಮಾಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net