ಹಾವೇರಿ: ಷೇರು ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭದ ಆಸೆ ತೋರಿಸಿ ಸವಣೂರಿನ ಫಾರ್ಮಾಸಿಸ್ಟ್‌ವೊಬ್ಬರಿಗೆ 17.40 ಲಕ್ಷ ರೂ. ವಂಚಿಸಿದ್ದಾರೆ.
ಸವಣೂರ ಹಳೇಪೇಟ ಓಣಿ ನಿವಾಸಿ ರಾಮಕೃಷ್ಣ ಘಾಟಗೆ ವಂಚನೆಗೆ ಒಳಗಾದವರು. ಆ.7ರಿಂದ ಸೆ.5ರ ನಡುವಿನ ಅವಧಿಯಲ್ಲಿ ಅಪರಿಚಿತರು ನುವಾಮಾ ಇಂಟರ್ ನ್ಯಾಶನಲ್ ಹೆಸರಿನಲ್ಲಿ ವಾಟ್ಸ್ ಆ್ಯಪ್ ಮೂಲಕ ಪರಿಚಯವಾಗಿದ್ದರು. 20 ಲಕ್ಷ ಹೂಡಿದರೆ ಐಪಿಒ ಖರೀದಿಸಲು ಶೇ.100ರಷ್ಟು ಹಾಗೂ ಶೇರ್ ಟ್ರೇಡಿಂಗ್‌ಗೆ ಶೇ.20ರಷ್ಟು ಲಾಭ ಕೊಡುವುದಾಗಿ ನಂಬಿಸಿದ್ದರು. ವಿವಿಧ ಬ್ಯಾಂಕ್ ಖಾತೆ ನಂಬರ್ ಕೊಟ್ಟು 17,40,000 ರೂ. ವರ್ಗಾಯಿಸಿಕೊಂಡು, ಹಣ ಕೊಡದೇ ಮೋಸ ಮಾಡಿದ್ದಾರೆ ಎಂದು ರಾಮಕೃಷ್ಣ ಹಾವೇರಿ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.