ಬಾರ್ ಆ್ಯಂಡ್ ರೆಸ್ಟೋರೆಂಟ್ ಆರಂಭಿಸುವುದಾಗಿ 69 ಲಕ್ಷ ರೂ. ವಂಚನೆ

Crime Logo
Published on

ಹಾವೇರಿ: ಪಾಲುದಾರಿಕೆಯಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಡುವುದಾಗಿ ನಂಬಿಸಿ 69 ಲಕ್ಷ ರೂ. ತೆಗೆದುಕೊಂಡು ಮೋಸ ಮಾಡಿದ ಘಟನೆ ಕುರಿತು ಇಲ್ಲಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.
ನಗರದ ಸುರೇಶ ಶಿವಾಜಿರಾವ ಜಾಧವ ಎಂಬುವರಿಗೆ ಮೋಸ ಮಾಡಿರುವುದು. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಗರಗ ಗ್ರಾಮದ ರಾಜೇಂದ್ರ ಸಣ್ಣಪ್ಪ ಜಿ.ಎಚ್. ಮೋಸ ಮಾಡಿರುವ ಆರೋಪಿ.
ಪ್ರಕರಣದ ಕುರಿತು ಮೋಸ ಹೋದವನ ಸಹೋದರ ಶಿರಹಟ್ಟಿ ತಾಲೂಕಿನ ಉಪನ್ಯಾಸಕ ಯಲ್ಲಪ್ಪ ಪಂಗಣ್ಣನವರ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ರಾಜೇಂದ್ರ ಯಲ್ಲಪ್ಪ ಅವರ ಸಹೋದರನ್ನು ಪರಿಚಯ ಮಾಡಿಕೊಂಡು ಇಬ್ಬರು ಪಾಲುದಾರಿಕೆಯಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಆರಂಭಿಸೋಣ ಎಂದು ಹೇಳಿಕೊಂಡು ಅವರ ವಿವಿಧ ಖಾತೆಗಳಿಂದ ಒಟ್ಟು 69 ಲಕ್ಷ ರೂ. ಹಾಕಿಸಿಕೊಂಡಿದ್ದಾನೆ. ನಂತರ ಬಾರ್ ಆ್ಯಂಡ್ ರೆಸ್ಟೋರೆಂಟ್ ಆರಂಭಿಸಿದೆ ಮೋಸ ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net