

ವಿಜಯವಾಣಿ ವಿಶೇಷ ಹಾವೇರಿ
ಕೇಂದ್ರ, ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಎಷ್ಟೇ ಜಾಗೃತಿ ಮೂಡಿಸಿದರೂ ಸೈಬರ್ ವಂಚನೆಗೆ ಒಳಗಾಗುವವರ ಸಂಖ್ಯೆ ಮಾತ್ರ ತಿಂಗಳಿಂದ ತಿಂಗಳಿಗೆ, ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಜಿಲ್ಲೆಯೊಂದರಲ್ಲೇ ಎಂಟು ತಿಂಗಳಲ್ಲಿ 80 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದ್ದು, ವಂಚಕರು ಒಟ್ಟು 8,43,66,791 ರೂ. ವಂಚಿಸಿದ್ದಾರೆ.
2024ರ ಜನವರಿಯಿಂದ ಆಗಸ್ಟ್ 31ರವರೆಗೆ ಹಾವೇರಿ ಸೈಬರ್ ಕ್ರೈಂ (ಸಿಇಎನ್) ಪೊಲೀಸ್ ಠಾಣೆಯಲ್ಲಿ ಒಟ್ಟು 80 ಪ್ರಕರಣ ದಾಖಲಾಗಿದ್ದು, 8.43 ಕೋಟಿ ರೂ. ವಂಚನೆಗೀಡಾಗಿದೆ. ಇದರಲ್ಲಿ 55 ಕೇಸ್‌ಗಳನ್ನು ಪೊಲೀಸರು ಫ್ರೀಜ್ ಮಾಡಿದ್ದಾರೆ. 71.97 ಲಕ್ಷ ರೂ. ಸ್ಥಗಿತಗೊಳಿಸಿದ್ದು, 15.78 ಲಕ್ಷ ರೂ. ದೂರುದಾರರಿಗೆ ಖಾಕಿ ಪಡೆ ಹಿಂತಿರುಗಿಸಿದೆ.
2002ರಲ್ಲಿ 118 ಕೇಸ್ ದಾಖಲಾಗಿದ್ದು, 117 ಕೇಸ್ ಫ್ರೀಜ್ ಮಾಡಲಾಗಿತ್ತು. 1.88 ಕೋಟಿ ರೂ. ವಂಚನೆಗೀಡಾಗಿತ್ತು. ಇದರಲ್ಲಿ 11.96 ಲಕ್ಷ ರೂ.ಯನ್ನು ಪೊಲೀಸರು ದೂರುದಾರರಿಗೆ ಹಿಂತಿರುಗಿಸಿದ್ದಾರೆ. 2023ರಲ್ಲಿ 107 ಕೇಸ್ ವರದಿಯಾಗಿದ್ದು, 90 ಕೇಸ್ ಫ್ರೀಜ್ ಮಾಡಲಾಗಿತ್ತು. 2.16 ಕೋಟಿ ರೂ. ವಂಚನೆಯಾಗಿದ್ದು, 14.77 ಲಕ್ಷ ರೂ. ದೂರುದಾರರಿಗೆ ಆರಕ್ಷಕರು ವಾಪಸ್ ಕೊಡಿಸಿದ್ದಾರೆ.
ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಮೂರರಿಂದ ನಾಲ್ಕು ಪಟ್ಟು ಹೆಚ್ಚಿನ ಹಣ ವಂಚಕರ ಪಾಲಾಗಿದೆ. ಅನಕ್ಷರಸ್ಥರಿಗಿಂತ ಹೆಚ್ಚಾಗಿ ಅಕ್ಷರಸ್ಥರು, ಉನ್ನತ ವ್ಯಾಸಂಗ ಮಾಡಿರುವವರೇ ಸೈಬರ್ ವಂಚಕರ ದಾಳಕ್ಕೆ ಬೀಳುತ್ತಿರುವುದು ಆತಂಕ ಮೂಡಿಸಿದೆ. ಹಾಗಾಗಿ, ಮೊಬೈಲ್, ಇಂಟರ್‌ನೆಟ್ ಬಳಕೆದಾರರು ಎಷ್ಟು ಮುನ್ನೆಚ್ಚರಿಕೆ ವಹಿಸಿದರೂ ಕಡಿಮೆಯೇ ಎಂಬಂತಾಗಿದೆ.
ಮುನ್ನೆಚ್ಚರಿಗೆ ಹೀಗಿರಲಿ..