ಬೆಳೆ ವಿಮೆ ನೋಂದಣಿಗೆ ಆಗಸ್ಟ್ 1 ಕೊನೆ

Published on

ಹಾವೇರಿ: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಬೆಳೆ ವಿಮೆ ನೋಂದಣಿಗಾಗಿ ಆಗಸ್ಟ್ 1ರವರೆಗೆ ಅವಧಿ ವಿಸ್ತರಿಸಲಾಗಿದೆ
ಮುಂಗಾರು ಹಂಗಾಮಿನ ಶೇಂಗಾ (ಮಳೆ ಆಶ್ರಿತ), ಭತ್ತ (ಮಳೆ ಆಶ್ರಿತ) ಭತ್ತ (ನೀರಾವರಿ), ಮುಸುಕಿನ ಜೋಳ(ಮಳೆ ಆಶ್ರಿತ) ಗ್ರಾಮ ಪಂಚಾಯಿತಿವಾರು ಸಲ್ಲಿಸಲು ಆಗಸ್ಟ್ 1 ಕೊನೆಯ ದಿನವಾಗಿದೆ. ವಿವಿಧ ಬೆಳೆಗಳಿಗೆ ರೈತರು ಬ್ಯಾಂಕುಗಳಿಗೆ ಘೋಷಣೆಗಳನ್ನು ಸಲ್ಲಿಸಲು ಹೋಬಳಿವಾರು ಉದ್ದು (ಮಳೆ ಆಶ್ರಿತ), ಹತ್ತಿ (ನೀರಾವರಿ), ಹತ್ತಿ (ಮಳೆ ಆಶ್ರಿತ), ಅಲಸಂದಿ (ಮಳೆ ಆಶ್ರಿತ), ಹೆಸರು (ಮಳೆ ಆಶ್ರಿತ), ಶೇಂಗಾ (ನೀರಾವರಿ), ಶೇಂಗಾ (ಮಳೆ ಆಶ್ರಿತ), ಮುಸುಕಿನ ಜೋಳ (ನೀರಾವರಿ), ನವಣೆ (ಮಳೆ ಆಶ್ರಿತ), ಭತ್ತ (ನೀರಾವರಿ), ಭತ್ತ (ಮಳೆ ಆಶ್ರಿತ), ತೊಗರಿ (ಮಳೆ ಆಶ್ರಿತ), ರಾಗಿ (ಮಳೆ ಆಶ್ರಿತ), ಕೆಂಪು ಮೆಣಸಿನಕಾಯಿ (ನೀರಾವರಿ), ಕೆಂಪು ಮೆಣಸಿನಕಾಯಿ (ಮಳೆ ಆಶ್ರಿತ), ಸಾವೆ (ಮಳೆ ಆಶ್ರಿತ), ಎಳ್ಳು (ಮಳೆ ಆಶ್ರಿತ), ಜೋಳ (ನೀರಾವರಿ), ಜೋಳ (ಮಳೆ ಆಶ್ರಿತ), ಸೋಯಾಅವರೆ (ಮಳೆ ಆಶ್ರಿತ) ಮತ್ತು ಟ್ಯೊಮ್ಯಾಟೋ ನೋಂದಣಿಗೆ ಆ.1 ಕೊನೆಯ ದಿನವಾಗಿದೆ. ಸೂರ್ಯಕಾಂತಿ (ಮಳೆ ಆಶ್ರಿತ) ನೋಂದಣಿಗೆ ಆಗಸ್ಟ್ 16ರವರೆಗೆ ಅವಕಾಶವಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net