ಬೆಂಗಳೂರಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ನ.1ರಿಂದ

Published on

ಹಾವೇರಿ: ಬೆಂಗಳೂರಿನ ಆಚಾರ್ಯ ಸ್ಟೇಡಿಯಂನಲ್ಲಿ ಅ.1ರಿಂದ ಡಿಸೆಂಬರ್ 1ರವರೆಗೆ ಕರ್ನಾಟಕ ಸಾಫ್ಟ್‌ಬಾಲ್ ಪ್ರೀಮಿಯರ್ ಲೀಗ್ (ಕೆಎಸ್‌ಪಿಎಲ್) ನಡೆಯಲಿದೆ ಎಂದು ಕರ್ನಾಟಕ ಸ್ಟೇಟ್ ಸಾಫ್ಟ್‌ಬಾಲ್ ಕ್ರಿಕೆಟ್ ಅಸೋಸಿಯೇಶನ್ (ಕೆಎಸ್‌ಎಸ್‌ಸಿಎ) ಅಧ್ಯಕ್ಷ ಗಂಗಾಧರ ರಾಜು ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಎಸ್‌ಎಸ್‌ಸಿಎ ವತಿಯಿಂದ ನಡೆಯುತ್ತಿರುವ ಪ್ರಥಮ ಪಂದ್ಯಾವಳಿ ಇದಾಗಿದ್ದು, 17ರಿಂದ 35 ವರ್ಷದೊಳಗಿನವರು ತಂಡದಲ್ಲಿ ಇರಲಿದ್ದಾರೆ. ಈ ಟೂರ್ನಿ ಮುಂದಿನ ಪೀಳಿಗೆಯ ಕ್ರಿಕೆಟ್ ಪ್ರತಿಭೆಗಳಿಗೆ ವೇದಿಕೆಯಾಗಲಿದೆ. 32 ಜಿಲ್ಲೆಗಳಿಂದ ಒಟ್ಟು 32 ತಂಡಗಳು ಭಾಗವಹಿಸುತ್ತಿವೆ. 9 ಓವರ್‌ಗೆ ಒಂದು ಮ್ಯಾಚ್ ನಡೆಯಲಿದೆ. ಎಲ್ಲ ಜಿಲ್ಲೆಗಳಲ್ಲಿ ಈಗಾಗಲೇ ತಂಡ ಆಯ್ಕೆಮಾಡಲಾಗಿದೆ. ಹಾವೇರಿ ಜಿಲ್ಲೆಯಿಂದಲೂ ಒಂದು ತಂಡವನ್ನು ಆಯ್ಕೆ ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹಾವೇರಿ ತಂಡದ ಮಾಲೀಕ ಗಣೇಶ ಜಾವೂರ, ರಕ್ಷಿತಾ ಹಿರೇಮಠ, ಅರ್ಪಿತ್ ಆರ್.ಎಸ್., ಸುನೀಲ ಕೆ., ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net