ಹಾವೇರಿ ಎಸಿ ಕಾರು ಜಪ್ತಿ ಮಾಡಿದ ಕೋರ್ಟ್

11 HVR 9- AC Car Japti
Published on

ಹಾವೇರಿ: ಕೆರೆಗಾಗಿ ಭೂಸ್ವಾಧೀನಪಡಿಸಿಕೊಂಡಿದ್ದ ಜಮೀನಿಗೆ ಹೆಚ್ಚುವರಿ ಪರಿಹಾರ ನೀಡದ ಹಿನ್ನೆಲೆಯಲ್ಲಿ ಹಾವೇರಿ ಉಪವಿಭಾಗಾಧಿಕಾರಿ (ಎಸಿ) ಎಚ್.ಬಿ.ಚನ್ನಪ್ಪ ಅವರ ಕಾರನ್ನು ನ್ಯಾಯಾಲಯ ಮಂಗಳವಾರ ಜಪ್ತಿ ಮಾಡಿದೆ.

ಸಣ್ಣ ನೀರಾವರಿ ಇಲಾಖೆಗೆ ಸೇರಿದ ಬ್ಯಾಡಗಿ ತಾಲೂಕು ಅಂಗರಗಟ್ಟಿ ಗ್ರಾಮದ ಕೆರೆಗಾಗಿ ಕೆಲ ರೈತರ ಭೂಮಿಯನ್ನು ಹಾವೇರಿ ಎಸಿ ಕಚೇರಿಯಿಂದ ಭೂಸ್ವಾಧೀನ ಪಡಿಸಿಕೊಳ್ಳಲಾಗಿತ್ತು. 45 ಲಕ್ಷ ರೂ. ಹೆಚ್ಚುವರಿ ಪರಿಹಾರ ಕೊಡಬೇಕೆಂದು ಸಂತ್ರಸ್ಥರು ಅರ್ಜಿ ಸಲ್ಲಿಸಿದ್ದರು. ಹಾಗಾಗಿ, ನ್ಯಾಯಾಲಯದ ಅಧಿಕಾರಿ, ಸಿಬ್ಬಂದಿ ಹಾವೇರಿ ಉಪವಿಭಾಗಾಧಿಕಾರಿ ಎ.ಸಿ.ಚನ್ನಪ್ಪ ಅವರ ಮಹೀಂದ್ರಾ ಟಿಯುವಿ 300 ಕಾರನ್ನು ಜಪ್ತಿ ಮಾಡಿದೆ.

ಹೆಚ್ಚುವರಿ ಪರಿಹಾರವನ್ನು ಸಣ್ಣ ನೀರಾವರಿ ಇಲಾಖೆಯವರು ಕೊಡಬೇಕು. ನಾವು ಕೇವಲ ಭೂಸ್ವಾಧೀನ ಮಾಡಿಕೊಂಡಿದ್ದೆವು. ಈ ಕುರಿತು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದಿದ್ದೇವೆ ಎಂದು ಹಾವೇರಿ ಎಸಿ ಎಚ್.ಬಿ.ಚನ್ನಪ್ಪ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net