ಹಾವೇರಿ: ಕೃಷಿ ಮಾರಾಟ ಇಲಾಖೆಯು 2025-26ನೇ ಸಾಲಿನ ಭಾರತೀಯ ಹತ್ತಿ ನಿಗಮ ನಿಯಮಿತ ನೋಂದಾಯಿತ ರೈತರಿಂದ ಹತ್ತಿ ಖರೀದಿಸುವ ಕೇಂದ್ರ ಆರಂಭಿಸಿದೆ.
ಮದ್ಯಮ ಎಳೆಯ ಹತ್ತಿಗೆ 7,710 ರೂ., ಉದ್ದನೆಯ ಎಳೆಗೆ 8,110 ರೂ.ಗೆ ನಿಗದಿಪಡಿಸಲಾಗಿದೆ. ಜಿಲ್ಲೆಯಲ್ಲಿ ಹತ್ತಿ ಖರೀದಿ ಕೇಂದ್ರಗಳನ್ನು ಹಾವೇರಿ ತಾಲೂಕಿನ ಹೇಮಗಿರಿ ಚನ್ನಬಸವೇಶ್ವರ ಕಾಟನ್ ಜಿನ್ನಿಂಗ್ ಪ್ರೆಸ್ಸಿಂಗ್ ಫ್ಯಾಕ್ಟರಿ ಗುತ್ತಲ ಹಾಗೂ ಫಾರ್ಚುನ್ ಕಾಟನ್ ಆಗ್ರೋ ಇಂಡಸ್ಟ್ರೀಸ್ ಗೌರಾಪೂರ, ಶಿಗ್ಗಾಂವಿ ತಾಲೂಕಿನ ಹಿರೇಮಠ ಅಗ್ರೋ ಇಂಡಸ್ಟ್ರೀಸ್ ಕಡಹಳ್ಳಿ ಕ್ರಾಸ್, ರಾಣೆಬೆನ್ನೂರ ನಗರದ ಪಿ.ಬಿ ರಸ್ತೆ ರಾಜೇಂದ್ರ ಜಿನ್ನಿಂಗ್ ಫ್ಯಾಕ್ಟರಿ ಇಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ. ರೈತರು ತಾವು ಬೆಳೆದ ಹತ್ತಿಯನ್ನು ಈ ಖರೀದಿ ಕೇಂದ್ರಗಳಲ್ಲಿ ಅ.28ರಿಂದ ಪೂರೈಸುವಂತೆ ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಬಿ.ಕಬ್ಬೇರಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.