ಶೇ.80ರಷ್ಟು ಮಹಿಳೆಯರ ಓಟು ಕಾಂಗ್ರೆಸ್‌ಗೆ; ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ

17 HVR 2 A
Published on

ಹಾವೇರಿ: ಮಹಿಳೆಯರು ನಮ್ಮ ಸರ್ಕಾರದ ಕಾರ್ಯಕ್ರಮಗಳನ್ನು ಮೆಚ್ಚಿಕೊಂಡಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಹಾಗಾಗಿ, ಶೇ.80ರಷ್ಟು ಮಹಿಳೆಯರು ಕಾಂಗ್ರೆಸ್‌ಗೆ ಮತ ಹಾಕುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಭರವಸೆ ವ್ಯಪ್ತಪಡಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ನಾಮಪತ್ರ ಸಲ್ಲಿಕೆ ವೇಳೆ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕನಿಷ್ಠ 18ರಿಂದ 20 ಸ್ಥಾನ ಗೆಲ್ಲುತ್ತೇವೆ. ಉತ್ತರ ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಹಾವೇರಿ, ಬಾಗಲಕೋಟೆ ಮತ್ತು ವಿಜಯಪುರದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. ಜನರು ನಮ್ಮ ಜೊತೆಗೆ ಇದ್ದಾರೆ ಎಂದರು.
ಕೆ.ಎಸ್.ಈಶ್ವರಪ್ಪನವರು ಇಷ್ಟೆಲ್ಲ ತಯಾರಿ ಮಾಡಿದ್ದರು. ಬೊಮ್ಮಾಯಿ ಸಾಹೇಬರು ಈಶ್ವರಪ್ಪನವರಿಗೆ ಹೇಳದೇ ಬಂದಿದ್ದಾರೆ. ನೀವೇ ಪ್ರಚಾರ ಮಾಡಲು ಹೇಳಿ ಮರೆತಿದ್ದೀರಿ. ಒಮ್ಮೆ ಮುಖ್ಯಮಂತ್ರಿ ಆದಮೇಲೆ ಮತ್ತೊಂದು ಆಸೆ ಮಾಡಬಹುದಾ ? ಜೀವನದ ಅಂತಿಮ ಗುರಿ ತಲುಪಿದ ನಂತರ ದೊಡ್ಡದಾಗಿ ಚಿಂತಿಸಬೇಕು. ಬೊಮ್ಮಾಯಿ ಬಂದ ನಂತರ ಬಿಜೆಪಿ ಪಕ್ಷ ಒಡೆದು ಹೋಗಿದೆ. ಯಾರು ಎದೆಯಲ್ಲಿ ರಾಮ-ಮೋದಿ ಇದ್ದರು. ಈಗ ಏನಾಗಿದೆ ನಿಮಗೇ ಗೊತ್ತಿದೆ. ಪಾಪ ಹೊಸಬರಿಗೆ ಅವಕಾಶ ಕೊಡಬೇಕಿತ್ತು ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ ಮುಂದುವರೆಯುತ್ತಾರೆ :
ಲೋಕಸಭಾ ಚುನಾವಣೆ ನಂತರ ಯಾವುದೇ ಬದಲಾವಣೆ ಇಲ್ಲ. ಸಿದ್ದರಾಮಯ್ಯ ಮುಂದೆವರೆಯುತ್ತಾರೆ. ಡಿ.ಕೆ.ಶಿವಕುಮಾರ ಮುಂದುವರೆಯುತ್ತಾರೆ. ಅವರ ಕುರ್ಚಿ ಭರ್ತಿಯಾಗಿವೆ. ಬಸವರಾಜ ರಾಯರೆಡ್ಡಿ ಹೇಳಿಕೆಯನ್ನು ನಾನು ಕೇಳಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net