ಶಾಂತಿ, ಸಮನ್ವಯತೆ ಕಾಪಾಡುವುದೂ ದೇಶಭಕ್ತಿಯೇ; ಆನಂದಸ್ವಾಮಿ ಗಡ್ಡದೇವರಮಠ ಹೇಳಿಕೆ

15 HVR 9
Published on

ಹಾವೇರಿ: ಸದೃಢ ದೇಶದ ನಿರ್ಮಾಣಕ್ಕಾಗಿ ಸದೃಢ ಸಮಾಜವನ್ನು ಮೊದಲು ನಿರ್ಮಿಸಬೇಕಾಗಿದೆ. ಸತ್‌ಚಿಂತನೆ, ಸಹೋದರತೆ ಇವು ಅದರ ಮೊದಲ ಮೆಟ್ಟಿಲು. ಶಾಂತಿಗಾಗಿ, ಸಮನ್ವಯತೆಗಾಗಿ ನಮ್ಮ ನಮ್ಮ ಕೊಡುಗೆಗಳನ್ನು ಕೊಡುವುದೂ ಕೂಡ ದೇಶ ಭಕ್ತಿಯೇ ಆಗಿದೆ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.
ಚುನಾವಣೆ ಹಿನ್ನೆಲೆಯಲ್ಲಿ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ಮಾನವ ಬಂಧುತ್ವ ವೇದಿಕೆಯಿಂದ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂತಹ ಶಾಂತಿ ಸಹಬಾಳ್ವೆಯ, ಸಮಾನತೆ ತತ್ವಗಳ ತಳಹದಿ ಮೇಲೆಯೇ ದೇಶವನ್ನು ಮುನ್ನಡೆಸಿಕೊಂಡು ಬಂದಿರುವ ಕಾಂಗ್ರೆಸ್ ಪಕ್ಷ ಮತ್ತೆ ಸಶಕ್ತವಾಗಿ ದೇಶ ಮುನ್ನಡೆಸಲು ಪ್ರತಿಯೊಬ್ಬ ಪ್ರಜೆಯೂ ಕಾಂಗ್ರೆಸ್‌ಗೆ ಮತನೀಡಿ ಬಹುಮತದಿಂದ ಆರಿಸಿ ತರಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಶಾಸಕ ರುದ್ರಪ್ಪ ಲಮಾಣಿ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಭು ಬಿಷ್ಟನಗೌಡ್ರ, ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಎ.ಬಿ.ರಾಮಚಂದ್ರಪ್ಪ, ಜಿಲ್ಲಾ ಸಂಚಾಲಕ ರವಿ ಹಾದಿಮನಿ, ಭಾರತ ಸೇವಾ ಪೋರ್ಸ್ ರಾಜ್ಯಾಧ್ಯಕ್ಷ ಏಳುಕೋಟೆಪ್ಪ ಪಾಟೀಲ, ಮಂಜುನಾಥ ಕಚವಿ, ದುರ್ಗಪ್ಪ ನೀರಲಗಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net