

ಹಾವೇರಿ: ಹಾವೇರಿ ವಿಧಾನಸಭಾ ಕ್ಷೇತ್ರದ ಮಂಟಗಣಿ ಗ್ರಾಮದ ಹಲವು ಕಾಂಗ್ರೆಸ್ ಮುಖಂಡರು ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಬುಧವಾರ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ನೇತೃತ್ವದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.
ಮಂಟಗಣಿ ಗ್ರಾಮದ ಹನುಮಂತಗೌಡ ಪಾಟೀಲ, ನೇಮಚಂದ್ರ ಹಾವೇರಿ, ಪ್ರದೀಪ ದೊಡ್ಡಮನಿ, ಪ್ರವೀಣ ಹಾವೇರಿ, ಶಿವಾನಂದ ಕ್ಯಾಲಕೊಂಡ, ಮಾರುತಿ ಕರಿಯಮ್ಮನವರ, ನಜೀರ್ ಕುಕನೂರ, ಆನಂದ ಹುರಕಡ್ಲಿ, ಯಲ್ಲಪ್ಪ ಕರಿಯಮ್ಮನವರ ಹಾಗೂ ಹಂದಿಗನೂರ, ಬೈರಾಪೂರ ಗ್ರಾಮದ ವೀರೇಶ ಬೆಟ್ಟಿ, ವಿರೇಶ ತರ್ಲಘಟ್ಟ, ಸತೀಶ ಪಾಟೀಲ, ಮಹೇಶ ಪಾಟೀಲ್, ಶಿವಲಿಂಗೇಶ ಮನ್ನಂಗಿ, ಶಿವು ಪಾಟೀಲ, ಶಂಭುಲಿಂಗಯ್ಯ ಕಳ್ಳಿಮಠ, ಹರೀಶ ಬಾರ್ಕಿ, ಈಶ್ವರಗೌಡ ಪಾಟೀಲ, ಚನ್ನಬಸವಗೌಡ ಪಾಟೀಲ ಸೇರಿದಂತೆ ಮತ್ತಿತರರಿಗೆ ಸಿದ್ದರಾಜ ಕಲಕೋಟಿ ಪಕ್ಷದ ಶಾಲು ಹೊದಿಸಿ ಬಿಜೆಪಿಗೆ ಸೇರ್ಪಡಿಸಿಕೊಂಡರು.
ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ, ಇಂದು ಬಿಜೆಪಿ ಸರ್ವ ಜನರನ್ನು ತಲುಪಿ ದೇಶದ ಸಮಗ್ರ ಬೆಳವಣಿಗೆಗೆ ಒತ್ತು ನೀಡಿದೆ. ನರೇಂದ್ರ ಮೋದಿಯವರ ಹಾಗೂ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರ ರಾಷ್ಟ್ರದ ಬೆಳವಣಿಗೆಯಲ್ಲಿ ಅಮೋಘ ಕೊಡುಗೆ ನೀಡಿದೆ. ಇದೇ ಕಾರಣಕ್ಕೆ ಇಂದು ಸಾವಿರಾರು ಮುಖಂಡರು ಬಿಜೆಪಿ ಸೇರುತ್ತಿದ್ದಾರೆ. ಕಾಂಗ್ರೆಸ್ ತೊರೆದು ಬರುವ ಎಲ್ಲರನ್ನೂ ಬಿಜೆಪಿ ಅತ್ಯಂತ ಗೌರವದಿಂದ ನಡೆಸಿಕೊಳ್ಳುತ್ತದೆ ಎಂದರು.
ಈ ಸಂದರ್ಭದಲ್ಲಿ ಮಂಟಗಣಿ, ಹಂದಿಗನೂರ, ಬೈರಾಪೂರ ಗ್ರಾಮದ ಮುಖಂಡರಾದ ಶ್ರೀಕಾಂತಗೌಡ ಪಾಟೀಲ, ಚನ್ನವೀರಗೌಡ ಪಾಟೀಲ, ಹನುಮಂತ ನಾನಪೂರ, ಜಗದೀಶ ಕರ್ಜಗಿ, ಮೈಲಾರೆಪ್ಪ ರಬಜ್ಜನವರ, ಬಸವರಾಜ ಲಂಗುಟಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ರುದ್ರೇಶ ಚಿಣ್ಣನ್ನನವರ, ಜಿಲ್ಲಾ ಕಾರ್ಯದರ್ಶಿ ಡಾ.ಸಂತೋಷ ಆಲದಕಟ್ಟಿ, ಕಾರ್ಯಾಲಯ ಕಾರ್ಯದರ್ಶಿ ರಮೇಶ ಪಾಲನಕರ, ಗುಡ್ಡಪ್ಪ ಭರಡಿ, ಮಧುಕೇಶ್ವರ ಹಂದ್ರಾಳ, ಫಕ್ಕೀರೇಶ ಹಾವನೂರ, ಮಂಜುನಾಥ ಮಡಿವಾಳರ, ವೀರಣ್ಣ ಅಂಗಡಿ, ಇತರರು ಪಾಲ್ಗೊಂಡಿದ್ದರು.