ನಗರಸಭೆ ಸಿಬ್ಬಂದಿ ಕೊರತೆ ಕುರಿತು ಪ್ರಸ್ತಾವನೆ ಕೊಡಿ; ಪೌರಾಯುಕ್ತರಿಗೆ ಶಾಸಕ ರುದ್ರಪ್ಪ ಲಮಾಣಿ ಸೂಚನೆ

20 HVR 7
Published on

ಹಾವೇರಿ: ಇಲ್ಲಿನ ನಗರಸಭೆಯಲ್ಲಿ ಸಿಬ್ಬಂದಿ ಕೊರತೆಯಿಂದ ಅನೇಕ ಕೆಲಸಗಳು ನಿಧಾನಗತಿಯಲ್ಲಿ ಸಾಗಿವೆ. ಹಾಗಾಗಿ, ಅಗತ್ಯ ಸಿಬ್ಬಂದಿ ನೇಮಕದ ಕುರಿತು ಪ್ರಸ್ತಾವನೆ ಸಲ್ಲಿಸಿ, ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿ ಸಿಬ್ಬಂದಿ ನೇಮಕ ಮಾಡಿಸುತ್ತೇನೆ ಎಂದು ಶಾಸಕ ರುದ್ರಪ್ಪ ಲಮಾಣಿ ಪೌರಾಯುಕ್ತ ಗಂಗಾಧರ ಬೆಲ್ಲದ ಅವರಿಗೆ ಸೂಚನೆ ನೀಡಿದರು.

ನಗರಸಭೆಯ ಶಾಸಕರ ಕಚೇರಿಯಲ್ಲಿ ಮಂಗಳವಾರ ನಗರಸಭೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಶಾಸಕರು, ಹೊಸ ಸಿಬ್ಬಂದಿ ನೇಮಕ ಆಗುವವರೆಗೆ ಇದ್ದ ಸಿಬ್ಬಂದಿ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡಿಕೊಂಡು ಹೋಗಿ. ಪೌರಾಯುಕ್ತರು ಹೊಸಬರಾಗಿದ್ದು, ಕೆಲಸ ಕಾರ್ಯಗಳಲ್ಲಿ ಅವರಿಗೆ ಸಹಕಾರ ನೀಡಿ. ಆದಷ್ಟು ಬೇಗ ಎಇಇ ಬರುತ್ತಾರೆ. ಆಶ್ರಯ ಫಲಾನುಭವಿಗಳ ಆಯ್ಕೆಪಟ್ಟಿಯನ್ನು ಮಾಡಿ, ವಿತರಣೆಗೆ ಕ್ರಮ ಜರುಗಿಸಿ ಎಂದು ಸಲಹೆ ನೀಡಿದರು.

ನಗರಸಭೆ ಅಧ್ಯಕ್ಷೆ ಶಶಿಕಲಾ ರಾಮು ಮಾಳಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಮೊಹಮ್ಮದ್ ಸಮೀರ್, ಶೋಭಾ ಉದಗಟ್ಟಿ, ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net