ಹಾವೇರಿ ನಗರಸಭೆ ಎದುರು ರಾಜ್ಯ ಪೌರ ನೌಕರರ ಸಂಘದ ಸದಸ್ಯರ ಅನಿರ್ದಿಷ್ಠಾವಧಿ ಮುಷ್ಕರ ಆರಂಭ

28 HVR 3 B
Published on

ಹಾವೇರಿ: ಸರ್ಕಾರಿ ನೌಕರರು ಎಂದು ಪರಿಗಣಿಸುವುದು, ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸುವುದು ಸೇರಿದಂತೆ 18 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಪೌರ ನೌಕರರ ಸಂಘದ ಸದಸ್ಯರು ನಗರಸಭೆ ಕಾರ್ಯಾಲಯದ ಎದುರು ಬುಧವಾರ ಅನಿರ್ದಿಷ್ಠಾವಧಿ ಮುಷ್ಕರ ಆರಂಭಿಸಿದರು. ನೌಕರರು ಕಸ ಸಂಗ್ರಹ, ಸ್ವಚ್ಛತೆ, ಕಚೇರಿ ಕೆಲಸ ಸ್ಥಗಿತಗೊಳಿಸಿ, ಕರ್ತವ್ಯಕ್ಕೆ ಗೈರಾಗಿ ಪ್ರತಿಭಟನೆಗೆ ಸಾಥ್ ನೀಡಿದರು. ಸಂಘದ ಹಾವೇರಿ ಶಾಖಾ ಅಧ್ಯಕ್ಷ ಚಂದ್ರು ಬಿದರಿ, ಕಾರ್ಯದರ್ಶಿ ಮಾಲತೇಶ ತಿಗಳಣ್ಣನವರ, ರಮೇಶ ಮುಂಜೋಜಿ, ರಾಜು ಕಾಟೇನಹಳ್ಳಿ, ನಗರಸಭೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net