

ಹಾವೇರಿ: ಇಲ್ಲಿನ ನಗರಸಭೆ ಆವರಣದಲ್ಲಿ ಗುರುವಾರ ಇ-ಖಾತಾ ಅಭಿಯಾನಕ್ಕೆ ಶಾಸಕ, ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಚಾಲನೆ ನೀಡಿದರು.
ಸರ್ಕಾರ ಇ-ಆಸ್ತಿ ತಂತ್ರಾಶದ ಬಳಕೆ ಕಡ್ಡಾಯಗೊಳಿಸಿದೆ. ಆದ್ದರಿಂದ ನಗರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲ ರೀತಿಯ ಕಟ್ಟಡ, ನಿವೇಶನಗಳಿಗೆ ಆಸ್ತಿ ತೆರಿಗೆ ನಿರ್ಧರಣೆಗೊಳಿಸಿ ಆಸ್ತಿ ತೆರಿಗೆಯನ್ನು 2024-25ನೇ ಸಾಲಿನ ಅಂತ್ಯದೊಳಗೆ ಪೂರ್ಣ ಪ್ರಮಾಣದಲ್ಲಿ ಪಾವತಿಸಿಕೊಂಡು ಸಂಬಂಧಪಟ್ಟ ಆಸ್ತಿ ಮಾಲೀಕರಿಂದ ಅವಶ್ಯಕ ದಾಖಲೆಗಳನ್ನು ಪಡೆದು ಕರ್ನಾಟಕ ಪುರಸಭೆಗಳ ಅಧಿನಿಯಮ 1964ರ ಕಲಂ 106 (1ಬಿ) ಅನ್ವಯ ಅನಧಿಕೃತ ಸ್ವತ್ತುಗಳನ್ನು ಮಾಹಿತಿಯುಳ್ಳ ವಹಿಯನ್ನು ನಿರ್ವಹಿಸಬೇಕಾಗಿರುತ್ತದೆ.
ಆದ್ದರಿಂದ ನಗರಸಭೆ ವ್ಯಾಪ್ತಿಯೊಳಗೆ ಬರುವ ಸರ್ಕಾರಿ ಅರೆಸರ್ಕಾರಿ/ ಸ್ಥಳೀಯ ಸಂಸ್ಥೆಗಳ ಒಡೆತನದಲ್ಲಿರುವ ಆಸ್ತಿಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲ ರೀತಿಯ ಕಟ್ಟಡಗಳ, ನಿವೇಶನಗಳ ಮಾಲೀಕರು ನಿಮ್ಮ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳಾದ ಎಲ್ಲ ನೋಂದಾಯಿತ ಪತ್ರಗಳು, ಆಸ್ತಿಯ ಛಾಯಾಚಿತ್ರ, ಮಾಲೀಕರ ಭಾವಚಿತ್ರ, ಮಾಲೀಕರ ಗುರುತಿನ ಚೀಟಿ, ಪಾನ್‌ಕಾರ್ಡ್, ರೇಷನ್ ಕಾರ್ಡ್, ನಮೂನೆ-15(ಇಸಿ), ಕೆಇಬಿ ಬಿಲ್, ಕಟ್ಟಡ ಪರವಾನಗಿ ಮತ್ತು ಅನುಮೋದಿತ ನಕ್ಷೆ, ಬಿನಶೆತಕಿ ನಕಲುಪ್ರತಿ, ಏಕ ನಿವೇಶನ, ಬಹುನಿವೇಶನಗಳ ತಾಂತ್ರಿಕ ಅನುಮೋದನೆ ನಕ್ಷೆ, ಸಿಟಿಎಸ್ ಉತಾರ, ಕಂದಾಯ ಪಾವತಿಸಿದ ರಶೀದಿ ಹಾಗೂ ಅವಶ್ಯಕ ಇರುವ ಇತರೆ ದಾಖಲೆಗಳನ್ನು ಹಾಜರುಪಡಿಸಿ ನಿಮ್ಮ ಆಸ್ತಿಯನ್ನು ಗಣಕೀಕರಣಗೊಳಿಸಿಕೊಂಡು ಅನ್ವಯವಾಗುವ ನಮೂನೆ-3/ನಮೂನೆ-3ಂ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಸದಸ್ಯರಾದ ಸಂಜೀವಕುಮಾರ ನೀರಲಗಿ, ಗಣೇಶ ಬಿಷ್ಟಣ್ಣನವರ, ಇತರರು ಉಪಸ್ಥಿತರಿದ್ದರು.