

ಹಾವೇರಿ: ವಿದ್ಯುತ್ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಜು.14ರಂದು ಹಾವೇರಿ 110 ಕೆ.ವಿ.ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಭಾರತಿ ನಗರ, ದೇವಿಹೊಸೂರ, ಕುರುಬಗೊಂಡ, ಡಿಸಿ ಆಫೀಸ್, ಕೋಳೂರು ಎನ್‌ಜೆವೈ ಹಾಗೂ ನಾಗನೂರ ಮಾರ್ಗಗಳಲ್ಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಹಾವೇರಿ ನಗರದ ವ್ಯಾಪ್ತಿಗೆ ಬರುವ ಹಾನಗಲ್ಲ ರೋಡ್, ಅಶ್ವಿನಿನಗರ ನೀರಿನ ಟ್ಯಾಂಕ್, ಜಿಲ್ಲಾ ಕೊರ್ಟ್ ವಸತಿ ಮನೆಗಳು, ಶಿವಾಜಿ ನಗರ 1 ಮತ್ತು 2ನೇ ಕ್ರಾಸ್, ಭಾರತಿ ನಗರ, ವರದಾನೇಶ್ವರಿ ಪಾರ್ಕ್, ಶ್ರೀಕಂಠಪ್ಪ ಬಡಾವಣೆ, ಗ್ರಾಮೀಣ ಪೋಲಿಸ್ ಠಾಣೆ, ವಿದ್ಯಾ ನಗರ ಪಶ್ಚಿಮ ಭಾಗ, ಮಿಡ್‌ಮ್ಯಾಕ್ ಲೇಔಟ್ ವೈಭವ ಲಕ್ಷ್ಮೀ ಪಾರ್ಕ್, ಸಾಯಿಅಕ್ಷಯ ಪಾರ್ಕ್, ಪಟ್ಟದಸ್ವಾಮಿ ಲೇಔಟ್, ತುಳಸಿ ಐಕಾನ್, ಮುದಗಲ್ ಲೇಔಟ್, ಅಗ್ನಿಶಾಮಕ ಠಾಣೆ, ಎಲ್‌ಐಸಿ ಹಿಂಭಾಗ ಹಾಗೂ ಸಿದ್ಧಾರೂಡ ಕಾಲನಿ, ಕೈಗಾರಿಕಾ ಪ್ರದೇಶ, ಆರ್.ಟಿ.ಒ ಆಫೀಸ್, ಡಿಸಿ ಆಫೀಸ್ ರೋಡ್, ಕೋಳೂರ, ಕರಜಗಿ ರೈಲ್ವೆಸ್ಟೇಷನ್, ಗಣಜೂರ, ನಾಗನೂರ, ವರದಹಳ್ಳಿ ಹಾಗೂ ದೇವಿಹೊಸುರ, ಬೆಂಚಿಹಳ್ಳಿ ಹೊಂಬರಡಿ, ಹೊಸಳ್ಳಿ, ಕನಕಾಪುರ, ತೋಟದಯಲ್ಲಾಪುರ, ನೇಲೊಗಲ್, ವೆಂಕಟಾಪುರ, ಆಲದಕಟ್ಟಿ, ಕೋಡಿಹಳ್ಳಿ ಗ್ರಾಮಗಳಲ್ಲಿ ಹಾಗೂ ಈ ಫೀಡರ್ ವ್ಯಾಪ್ತಿಗೆ ಬರುವ ಪ್ರದೆಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.