ಚೀಟಿ ವ್ಯವಹಾರ ಸಂಸ್ಥೆಗಳ ಪರವಾನಿಗೆ ಕಡ್ಡಾಯ

Published on

ಹಾವೇರಿ: ಜಿಲ್ಲೆಯಲ್ಲಿ ನೋಂದಣಿಯಾದ ಚೀಟಿ ಸಂಸ್ಥೆಗಳು ಪರವಾನಗಿ ಪಡೆದುಕೊಂಡು ಚೀಟಿ ಗುಂಪುಗಳನ್ನು ರಚಿಸಿಕೊಂಡು ವ್ಯವಹಾರ ಮಾಡುವುದು ಕಡ್ಡಾಯವಾಗಿದೆ. ಸಾರ್ವಜನಿಕರು ಪರವಾನಗಿ ಪಡೆದುಕೊಂಡ ಸಂಸ್ಥೆಗಳೊಂದಿಗೆ ವ್ಯವಹಾರ ಮಾಡಬೇಕು.
ಎಲ್ಲ ಚೀಟಿ ಸಂಸ್ಥೆಗಳ ಹೊಸ ಚೀಟಿ ಗುಂಪುಗಳ ವ್ಯವಹಾರ ಮಾಡುವ ಪೂರ್ವದಲ್ಲಿ ಜಿಲ್ಲಾ ಚೀಟಿನಿಧಿ ಉಪನಿಬಂಧಕರು ಹಾಗೂ ಸಹಕಾರ ಸಂಘಗಳ ಉಪನಿಬಂಧಕರಿಂದ ಕಡ್ಡಾಯವಾಗಿ ಪರವಾನಗಿ ಪಡೆದುಕೊಳ್ಳಬೇಕು. ಕಾನೂನು ಬಾಹೀರವಾಗಿ ಚೀಟಿ ಗುಂಪುಗಳ ವ್ಯವಹಾರ ನಡೆಸುತ್ತಿರುವ ಸಂಸ್ಥೆಗಳ ವಿರುದ್ಧ ಚೀಟಿನಿಧಿ ಕಾಯ್ದೆಯಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇಂತಹ ಚಟುವಟಿಕೆಗಳು ಕಂಡುಬಂದಲ್ಲಿ ಚೀಟಿನಿಧಿ ಉಪನಿಬಂಧಕರು ಹಾಗೂ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ ಸಂಪರ್ಕಿಸುವಂತೆ ಚೀಟಿನಿಧಿ ಉಪನಿಬಂಧಕರು ಹಾಗೂ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net