ಪಾಲಕರಿಗೆ ಮಗು ಪಡೆಯಲು ಕೊನೆಯ ಅವಕಾಶ

Published on

ಹಾವೇರಿ: ತಾಲೂಕಿನ ಕಳ್ಳಿಹಾಳ ಗ್ರಾಮದ ನಿವಾಸಿ ಪುಷ್ಪಾ ಉಮೇಶ ಉಪಳೆ ದಂಪತಿ ಸುಮಾರು 20 ದಿನದ ನವಜಾತ ಗಂಡು ಮಗುವನ್ನು ಹಾವೇರಿಯ ಖಾಸಗಿ ಆಸ್ಪತ್ರೆಯಿಂದ ಪಡೆದು ಅನಧಿಕೃತವಾಗಿ ಸಾಕುತ್ತಿದ್ದರು. ಈ ಮಗುವನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ವಶಕ್ಕೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮಗುವಿನ ಜೈವಿಕ ಪಾಲಕರಿಗೆ ಮಾನವೀಯತೆಯ ಆಧಾರದ ಮೇಲೆ ಮತ್ತೊಮ್ಮೆ ಮಗುವನ್ನು ಮರಳಿ ಪಡೆಯಲು ಕೊನೆಯ ಅವಕಾಶ ನೀಡಲಾಗಿದೆ. ಈ ಪ್ರಕಟಣೆಯ 60 ದಿನಗೊಳಗಾಗಿ ಮಗುವಿನ ಜೈವಿಕ ಪಾಲಕರಿಗೆ ಮಗು ಪಡೆಯಲು ಕೊನೆಯ ಅವಕಾಶ ಇರುತ್ತದೆ. ಸೂಕ್ತ ದಾಖಲೆಗಳೊಂದಿಗೆ ಸ್ಪಂದನಾ ವಿಶೇಷ ದತ್ತು ಸಂಸ್ಥೆ ಹಾವೇರಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾವೇರಿ ಕಚೇರಿಗೆ ಹಾಜರಾಗಬೇಕು.
ಇಲ್ಲದಿದ್ದಲ್ಲಿ ಮಗುವಿನ ಮುಂದಿನ ಭವಿಷ್ಯದ ಹಿತದೃಷ್ಠಿಯಿಂದ ಪ್ರಕಟಣೆಗೊಂಡ 60 ದಿನಗಳ ನಂತರ ಮಗುವನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಲ್ಲಿ ಪರಿತ್ಯಕ್ತ ಮಗುವೆಂದು ಎಂದು ಪರಿಗಣಿಸಿ ಕಾನೂನಿನ್ವಯ ದತ್ತು ಪ್ರಕ್ರಿಯೆಗೆ ಒಳಪಡಿಸಲಾಗುವುದು ಎಂದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನ್ನಪೂರ್ಣ ಸಂಗಳದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net