ಹಾವೇರಿ: ಬಾಲ್ಯವಿವಾಹ ಮುಕ್ತ ಜಿಲ್ಲೆ ಮಾಡಲು ಸಾರ್ವಜನಿಕರು ಸಹಕರಿಸಬೇಕು. ಬಾಲ್ಯ ವಿವಾಹ ಮುಕ್ತ ಪೋರ್ಟಲ್ ಲಿಂಕ್ https://stopchildmarriage.wcd.gov.in ಅನ್ನು ಕ್ಲಿಕ್ ಮಾಡಿ ನಂತರ ಟೇಕ್ ಪ್ಲೆಡ್ಜ್ ಎಂಬ ಅಂಶದ ಮೇಲೆ ಕ್ಲಿಕ್ ಮಾಡಿ ಪ್ರತಿಯೊಬ್ಬ ನಾಗರಿಕರು ಪ್ರಮಾಣ ವಚನ ಓದಬೇಕು. ನಂತರ ತಮ್ಮ ಹೆಸರು ನಮೂದಿಸಿ ಸರ್ಟಿಫಿಕೇಟ್ ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನ್ನಪೂರ್ಣ ಸಂಗಳದ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.