ಸಮಾಜ ಸೇವೆಗೂ ಮಹಿಳೆ ಸಮರ್ಥಳು; ಛತ್ರಪತಿ ಶಿವಾಜಿ ಮಹಿಳಾ ಸ್ವ ಸಹಾಯ ಸಂಘದ ಶಿಕ್ಷಕರ ದಿನಾಚರಣೆಯಲ್ಲಿ ಶಿಕ್ಷಕಿ ಗೀತಾ ಪವಾರ ಹೇಳಿಕೆ

26 HVR 1
Published on

ಹಾವೇರಿ: ಕುಟುಂಬದ ಜವಾಬ್ದಾರಿಯ ಜತೆಗೆ ಸಾಮಾಜಿಕ ಕೆಲಸ ಮಾಡುವುದಕ್ಕೂ ಹೆಣ್ಣು ಮಕ್ಕಳು ಸಮರ್ಥಗಳಾಗಿದ್ದಾರೆ ಎಂದು ಶಿಕ್ಷಕಿ ಗೀತಾ ಪವಾರ ಹೇಳಿದರು. ನಗರದಲ್ಲಿ ಛತ್ರಪತಿ ಶಿವಾಜಿ ಮಹಿಳಾ ಸ್ವ ಸಹಾಯ ಸಂಘದ ವತಿಯಿಂದ ಬುಧವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಮಕ್ಕಳ ಮೇಲೆ ತಂದೆ- ತಾಯಿಯ ಪ್ರಭಾವ ಹೆಚ್ಚಾಗಿರುತ್ತದೆ. ಹಾಗಾಗಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪಾಲಕರು ಶ್ರಮಿಸಬೇಕು ಎಂದರು.
ಸಂಘದ ಅಧ್ಯಕ್ಷೆ ಶಶಿರೇಖಾ ಮುಂಜೋಜಿ ಮಾತನಾಡಿ, ಹೆಣ್ಣು ಮಕ್ಕಳ ಕೇವಲ ಮನೆ ಕೆಲಸಕ್ಕೆ ಮಾತ್ರ ಸಿಮಿತವಾಗಿರದೇ ಸಾಮಾಜಿಕ ಕೆಲಸ ಮಾಡುವುದರಿಂದ ಹೆಮ್ಮೆಯಾಗುತ್ತದೆ ಎಂದರು.
ಸಮಾರಂಭದಲ್ಲಿ ಸಂಘದ ಕಾರ್ಯದರ್ಶಿ ಅಶ್ವಿನಿ ಬೋಸ್ಲೆ, ಪದಾಧಿಕಾರಿಗಳಾದ ಗಾಯತ್ರಿ ಜಾಧವ, ಅನಿತಾ ಜಾಧವ, ಪ್ರಭಾವತಿ ಗುಂಡೆ, ಯಲ್ಲಮ್ಮ ತಿಳವಳ್ಳಿ, ಸುಧಾಬಾಯಿ ತಿಳವಳ್ಳಿ, ಸುನಿತಾ ಮೋರೆ, ಸಂಜನಾ ಮೋರೆ, ಗೀತಾ ಜೋಡಿಗೆ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net