ಯುವಜನರಿಗೆ ಛತ್ರಪತಿ ಶಿವಾಜಿ ಆದರ್ಶ ಪುರುಷ; ಎಸ್.ಎಫ್.ಎನ್. ಗಾಜೀಗೌಡ್ರ

20 HVR 2
Published on

ಹಾವೇರಿ: ದೇಶದ ಚರಿತ್ರೆಯನ್ನು ಬದಲಾಯಿಸಿದ ಯುಗ ಪುರುಷ ಛತ್ರಪತಿ ಶಿವಾಜಿ ಮಹರಾಜರು. ಅವರ ತತ್ವಾದರ್ಶಗಳನ್ನು ಇಂದಿನ ಯುವ ಜನಾಂಗ ಮೈಗೂಡಿಸಿಕೊಳ್ಳಬೇಕು ಎಂದು ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜೀಗೌಡ್ರ ಕಿವಿಮಾತು ಹೇಳಿದರು.

ಇಲ್ಲಿನ ಶಿವಾಜಿನಗರದ ತಾಲೂಕು ಮರಾಠ ಸಮುದಾಯ ಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮರಾಠ ಸಮಾಜದ ಸಹಯೋಗದಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಶಿವಾಜಿ ಮಹಾರಾಜರಂತಹ ರಾಜರು ಇರಲಿಲ್ಲ. ಅವರ ದೇಶಭಕ್ತಿ, ರಾಷ್ಟ್ರಪ್ರೇಮ, ಯುದ್ಧನೀತಿ, ಧೈರ್ಯ, ಶೌರ್ಯ, ಮಹಿಳೆಯರ ಮೇಲಿನ ಗೌರವ, ಜಾತ್ಯಾತೀತ ಮನೋಭಾವನೆ ಅದ್ಭುತವಾಗಿತ್ತು. ರೈತರ ಬಗ್ಗೆಯೂ ಅಪಾರ ಕಳಕಳಿ ಹೊಂದಿದ್ದರು. ಮೊಘಲರೊಂದಿಗೆ ಯುದ್ಧ ಮಾಡಿ ಗೆದ್ದಿದ್ದರು. ತಾಯಿ ಜೀಜಾಬಾಯಿ ಮಾರ್ಗದರ್ಶನದಲ್ಲಿ ರಾಷ್ಟ್ರಭಕ್ತಿ ಬೆಳೆಸಿಕೊಂಡಿದ್ದ ಶಿವಾಜಿ ಮಹಾರಾಜರು ರಾಮಾಯಣ, ಮಹಾಭಾರತ ಓದಿ ಸ್ವರಾಜ್ಯ ನಿರ್ಮಿಸಿದ್ದರು. ಅವರ ದೇಶಭಕ್ತಿ, ರಾಷ್ಟ್ರಪ್ರೇಮ ಇಂದಿನ ಯುವ ಜನತೆಗೆ ಮಾದರಿಯಾಗಿದ ಎಂದು ಹೇಳಿದರು.

ಶಾಸಕ ರುದ್ರಪ್ಪ ಲಮಾಣಿ, ನಗರಸಭೆ ಅಧ್ಯಕ್ಷ ಶಶಿಕಲಾ ಮಾಳಗಿ, ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಎಂ.ಎಂ.ಮೈದೂರ, ಮರಾಠ ಸಮಾಜದ ಜಿಲ್ಲಾಧ್ಯಕ್ಷ ಎಂ.ಎನ್ ವೆಂಕೋಜಿ, ತಾಲೂಕಾಧ್ಯಕ್ಷ ಉಮೇಶ ವಾಘ, ಸಮಾಜದ ಪ್ರಮುಖರಾದ ಮಾಲತೇಶ ಕದಂ, ದೇವರಾಜ ಗುಂಡೆ, ಚಂದ್ರಶೇಖರ ಜಾಧವ, ದತ್ತಾತ್ರೇಯ ಘಾಟಗೆ, ರಘುವೀರ ಚೌಹಾಣ, ಶಶಿರೇಖಾ ಮುಂಜೋಜಿ, ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್.ವಿ.ಚಿನ್ನಿಕಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net