ಚನ್ನೇಶ ಸಹಕಾರಿ ಸಂಘದ ಹಾವೇರಿ ಶಾಖೆ ಉದ್ಘಾಟನೆ ಡಿ.26ರಂದು

Published on

ಹಾವೇರಿ: ರಾಣೆಬೆನ್ನೂರಿನ ಶ್ರೀ ಚನ್ನೇಶ ಪತ್ತಿನ ಸೌಹಾರ್ದ ಸಹಕಾರಿ ಸಂಘದ 25ನೇ ವರ್ಷದ ಬೆಳ್ಳಿ ಹಬ್ಬದ ಪ್ರಯುಕ್ತ ಹಾವೇರಿಯ ಮಾಗಾವಿ ಚೇಂಬರ್ಸ್‌ನಲ್ಲಿ ಡಿ.26ರಂದು ಬೆಳಗ್ಗೆ 11 ಗಂಟೆಗೆ ನೂತನ ಶಾಖೆ ಆರಂಭಿಸಲಾಗುತ್ತಿದೆ.
ಮಾಜಿ ಮುಖ್ಯಮಂತ್ರಿ, ಶಾಸಕ ಬಸವರಾಜ ಬೊಮ್ಮಾಯಿ ನೂತನ ಶಾಖೆ ಉದ್ಘಾಟಿಸಲಿದ್ದಾರೆ. ಶಿರಹಟ್ಟಿಯ ಶ್ರೀ ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ಹಾಗೂ ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸಂಘದ ಅಧ್ಯಕ್ಷ, ವಕೀಲ ಕೆ.ಶಿವಲಿಂಗಪ್ಪ ಅಧ್ಯಕ್ಷತೆ ವಹಿಸಲಿದ್ದು, ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಮಾಜಿ ಶಾಸಕ ಶಿವರಾಜ ಸಜ್ಜನರ, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷ ಜಿ.ನಂಜೇಗೌಡ, ನಿರ್ದೇಶಕ ರಾಮನಗೌಡ ಪಾಟೀಲ, ಎಂಡಿ ಶರಣಗೌಡ ಪಾಟೀಲ, ಪುಂಡಲೀಕಪ್ಪ ಶಿರೂರ, ಅಜ್ಮತ್‌ಉಲ್ಲಾಖಾನ್, ಸಿದ್ದರಾಜ ಕಲಕೋಟಿ, ಚಂದ್ರಶೇಖರ ಜಂಬಗಿ, ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಸಂಘದ ಮುಖ್ಯ ಕಾರ್ಯನಿರ್ವಾಹಕ ಕೆ.ಎನ್.ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net