ಮೋಟೆಬೆನ್ನೂರ ಬಳಿ ಭೀಕರ ರಸ್ತೆ ಅಪಘಾತ; ಸ್ಥಳದಲ್ಲೇ 6 ಜನರ ಸಾವು;

8 HVR 3 A
Published on

ಹಾವೇರಿ: ಹಾವೇರಿ ತಾಲೂಕು ಮೋಟೆಬೆನ್ನೂರ ಬಳಿ ಭೀಕರ ರಸ್ತೆ ಅಪಘಾತ. ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಆರು ಜನರ ಸಾವು..

ಬೆಂಗಳೂರು ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿರೋ ಅಪಘಾತ. ಹಾವೇರಿ ಜಿಲ್ಲೆಯ ಮೋಟೆಬೆನ್ನೂರು ಬಳಿ ನಡೆದಿರುವ ದುರಂತ.

ರಾಣೆಬೆನ್ನೂರಿಂದ ಹುಬ್ಬಳ್ಳಿಗೆ ಹೊರಟಿದ್ದ ಆಡಿ ಕಾರು. ಹಿಂಬದಿಯಿಂದ ಲಾರಿಗೆ ಡಿಕ್ಕಿ ಹೊಡೆದಿರುವ ಕಾರು..

ಬ್ಯಾಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.

ಹರಿಹರ ಕೇಶವ ನಗರದ ನಿವಾಸಿಗಳಾದ ಸೈಯದ್ ಫರ‌್ಹಾನ್ ಸೈಯದ್ ಇನಾಮುಲ್ಲಾ (20), ಉಮ್ಮೇರಾ ಸೈಯದ್ ಇನಾಮುಲ್ಲಾ (11), ಗೋವಾ ರಾಜ್ಯದ ಮಾಪಸಾ ನಿವಾಸಿಗಳಾದ ಅಲೀಷಾ ಅಕ್ಬರ್ ನಾರಂಗಿ (22), ಪುರಾಖಾನ್ ಅಕ್ಬರ್ ನಾರಂಗಿ (14), ರಾಣೆಬೆನ್ನೂರ ಸಿದ್ದೇಶ್ವರ ನಗರದ ಉಮ್ಮೀಶಿಫಾ ಅಫ್ರೋಜ್ ಉದಗಟ್ಟಿ (13) ಹಾಗೂ ಧಾರವಾಡದ ಆಶಿಯಾ ಖಲಂದರ್ (12) ಮೃತಪಟ್ಟವರು. ಗೋವಾ ಪಣಜಿಯ ಮೇಹಕ್ ರಶೀದ್ ನಾರಂಗಿ )18) ಹಾಗೂ ರಾಣೆಬೆನ್ನೂರಿನ ಉಮ್ಮೀತ್‌ಸಿನ್ ಅಫ್ರೋಜ್ ಉದಗಟ್ಟಿ (11) ಗಂಭೀರವಾಗಿ ಗಾಯಗೊಂಡಿದ್ದು, ಕಿಮ್ಸ್‌ಗೆ ದಾಖಲಿಸಲಾಗಿದೆ.

ಎಸ್ಪಿ ಅಂಶುಕುಮಾರ ಭೇಟಿ, ಪರಿಶೀಲನೆ

ಸ್ಥಳಕ್ಕೆ ಹಾವೇರಿ ಎಸ್ಪಿ ಅಂಶುಕುಮಾರ ಭೇಟಿ ನೀಡಿ ಪರಿಶೀಲನೆ. ಬಳಿಕ ಮಾಧ್ಯಮಗಳಿಗೆ ಹಾವೇರಿ ಎಸ್ಪಿ ಅಂಶುಕುಮಾರ ಹೇಳಿಕೆ.

ಮೋಟೆಬೆನ್ನೂರ ಬಳಿಯ NH 48 ರಲ್ಲಿ ಆ್ಯಕ್ಸಿಡೆಂಟ್ ಆಗಿದೆ. ಆಡಿ ಕಾರು ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಆರು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರಿಗೆ ಚಿಕಿತ್ಸೆ ನಡೆದಿದೆ. ಒಟ್ಟು ಕಾರಿನಲ್ಲಿ 8 ಜನರಿದ್ದರು. ಅದರಲ್ಲಿ 6 ಜನರು ಮೃತಪಟ್ಟಿದ್ದಾರೆ.

ಇವರೆಲ್ಲ ರಾಣೆಬೆನ್ನೂರ ನಗರದ ಸಿದ್ದೇಶ್ವರ ನಗರ ಮೂಲದವರು ಎಂದು ಗೊತ್ತಾಗಿದೆ. ಪಿಕ್ ನಿಕ್ ಅಂತೇಳಿ ಎಲ್ಲರೂ ಅಗಡಿ ತೋಟದ ಕಡೆಗೆ ಹೊರಟಿದ್ದರು. ಒಂದು ಬಸ್ ಮತ್ತು ಕಾರು ನಲ್ಲಿ ಕುಟುಂಬಸ್ಥರು ಹೊರಟಿದ್ದರು. ಓವರ್ ಸ್ಪೀಡ್ ನಿಂದಾಗಿ ಆಡಿ ಕಾರು ಲಾರಿ ಹಿಂಬದಿಗೆ ಡಿಕ್ಕಿ ಹೊಡೆದಿದೆ ಎಸ್ಪಿ ಅಂಶುಕುಮಾರ ಹೇಳಿಕೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net